Monday, 12th May 2025

ಆಜಾದ್ ಹೊಸ ಪಕ್ಷ ಡೆಮಾಕ್ರಟಿಕ್ ಆಜಾದ್ ಪಾರ್ಟಿ

ಮ್ಮು: ಗುಲಾಂ ನಬಿ ಆಜಾದ್ ತಮ್ಮ ಹೊಸ ಪಕ್ಷದ ಹೆಸರು ಮತ್ತು ಬಾವುಟ ವನ್ನು ಸೋಮವಾರ ಅನಾವರಣಗೊಳಿಸಿದರು. ಪಕ್ಷಕ್ಕೆ ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದರು.

‘ನಮ್ಮ ಹೊಸ ಪಕ್ಷಕ್ಕೆ ಸುಮಾರು 1,500 ಹೆಸರುಗಳನ್ನು ಉರ್ದು, ಸಂಸ್ಕೃತ ದಲ್ಲಿ ನನಗೆ ಕಳುಹಿಸಲಾಗಿತ್ತು. ‘ಹಿಂದೂಸ್ತಾನಿ’ ಎಂಬುದು ಹಿಂದಿ ಮತ್ತು ಉರ್ದು ಮಿಶ್ರಣವಾಗಿದೆ. ಪಕ್ಷದ ಹೆಸರೂ ಕೂಡ ಪ್ರಜಾಸತ್ತಾತ್ಮಕ, ಶಾಂತಿಯುತ ಮತ್ತು ಸ್ವತಂತ್ರ ವಾಗಿರಬೇಕು ಎಂದು ನಾನು ಬಯಸುತ್ತೇನೆ. ಹಾಗಾಗಿಯೇ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಎಂದು ಇರಿಸಲಾಗಿದೆ’ ಎಂದು  ಹೇಳಿದರು.

ಪಾರ್ಟಿಯ ಧ್ಜಜವನ್ನೂ ಆಜಾದ್‌ ಅವರು ಇದೇ ವೇಳೆ ಅನಾವರಣ ಮಾಡಿದರು. ಬಾವುಟದಲ್ಲಿ ಹಳದಿ, ಬಿಳಿ ಮತ್ತು ನೀಲಿ ಬಣ್ಣ ಅಡ್ಡಪಟ್ಟಿಯಂತೆ ಹೊಂದಿಸಲಾಗಿದೆ.

ಆಜಾದ್‌ ಅವರು ಆಗಸ್ಟ್ 26 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.