Tuesday, 13th May 2025

ಅಯೋಧ್ಯೆಯ ಚೌಕ್‌ಗೆ ಗಾಯಕಿ ʻಲತಾ ಮಂಗೇಶ್ಕರ್ʼ ಹೆಸರು ನಾಮಕರಣ

ಖನೌ: ಖ್ಯಾತ ಗಾಯಕಿ ʻಲತಾ ಮಂಗೇಶ್ಕರ್ʼಅವರ 93ನೇ ಜನ್ಮದಿನ ಇಂದು. ಈ ಸಂದರ್ಭದಲ್ಲಿ ಅಯೋಧ್ಯೆಯ ಚೌಕ್‌ಗೆ ಅವರ ಹೆಸರು ನಾಮಾಕರಣ ಮಾಡಲಾಗು ವುದು.

ಉತ್ತರ ಪ್ರದೇಶದ ಅಯೋಧ್ಯೆಯ ಚೌಕ್‌ ಅನ್ನು ಈಗ ಲತಾ ಮಂಗೇಶ್ಕರ್ ಚೌಕ್ ಎಂದು ಕರೆಯಲಾಗುತ್ತದೆ. ಲತಾ ಮಂಗೇಶ್ಕರ್ ಅವರ ಹೆಸರಿನ ಸ್ಮೃತಿ ಚೌಕ್ ಉದ್ಘಾಟನಾ ಸಮಾರಂಭ ನಡೆಯುತ್ತದೆ.

14 ಟನ್ ತೂಕದ 40 ಅಡಿ ಉದ್ದದ ವೀಣೆಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಚೌಕ್ ಅನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್‌ ಮಾಡಿ, ‘ಲತಾ ದೀದಿ ಅವರ ಜನ್ಮದಂದು ಅಯೋಧ್ಯೆಯ ಚೌಕ್‌ಗೆ ಅವರ ಹೆಸರಿಡಲಾಗುವುದು. ಇದು ಭಾರತದ ಶ್ರೇಷ್ಠ ಐಕಾನ್‌ಗಳಲ್ಲಿ ಒಬ್ಬರಿಗೆ ಸೂಕ್ತವಾದ ಗೌರವವಾಗಿದೆ’ ಎಂದು ಹೇಳಿದರು.