Sunday, 11th May 2025

Avadh Ojha: ಅರವಿಂದ್ ಕೇಜ್ರಿವಾಲ್ ದೇವರು, ಶ್ರೀಕೃಷ್ಣನ ಅವತಾರ’ ಎಂದ ಆಪ್‌ ಅಭ್ಯರ್ಥಿ !

Avadh Ojha

ನವದೆಹಲಿ: ಇತ್ತೀಚೆಗಷ್ಟೇ ಆಮ್ ಆದ್ಮಿ (Aam Aadmi Party) ಪಕ್ಷಕ್ಕೆ ಸೇರ್ಪಡೆಗೊಂಡ ಶಿಕ್ಷಣ ತಜ್ಞ, ರಾಜಕಾರಣಿ ಅವಧ್ ಓಜಾ (Avadh Ojha) ಅವರು ಹೇಳಿಕೆ ನೀಡಿದ್ದು ಇದೀಗ ವೈರಲ್‌ ಆಗಿದೆ. ಅವರು ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಪ್‌ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಶ್ರೀಕೃಷ್ಣನ ಅವತಾರ ಎಂದು ಕರೆಯುವ ಮೂಲಕ ಹೊಗಳಿದ್ದಾರೆ.

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವಧ್ ಓಜಾ ಪಟ್ಪರ್‌ಗಂಜ್‌ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪಕ್ಷ ಘೋಷಿಸಿದೆ. ಚುನಾವಣೆ ಬಗ್ಗೆ ಮಾತನಾಡಿರುವ ಅವರು “ಅರವಿಂದ್ ಕೇಜ್ರಿವಾಲ್ ಖಂಡಿತವಾಗಿಯೂ ದೇವರಂತೆ, ನಾನು ಯಾವಾಗಲೂ ಹೇಳುತ್ತೇನೆ ಅವರು ಕೃಷ್ಣನ ಅವತಾರ ಎಂದು. ಯಾರಾದರೂ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದಾಗಲೆಲ್ಲಾ, ಕಂಸನಂತಹ ದುಷ್ಟ ಶಕ್ತಿಗಳು ಅವರ ಹಿಂದೆ ಬೀಳುತ್ತವೆ ಎಂದು ಹೇಳಿದ್ದಾರೆ. ಕಂಸನಂತಹ ಮನಸ್ಥಿತಿ ಹೊಂದಿರುವವರು ಬಡವರ, ಹಿಂದುಳಿದವರ ಸೇವೆ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.

ಈಗ ದೆಹಲಿ ಇಡೀ ದೇಶಕ್ಕೆ ಮಾದರಿ ರಾಜ್ಯವಾಗಿದೆ, ಕೇಜ್ರಿವಾಲ್ 2029 ರಲ್ಲಿ ಪ್ರಧಾನಿಯಾಗುತ್ತಾರೆ ಎಂದು ಕೆಲವರು ಭಯಪಡುತ್ತಾರೆ ಎಂದು ಅವರು ಹೇಳಿದರು. ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಭಾರತದ ಚುನಾವಣಾ ಆಯೋಗವು ಇನ್ನೂ ಘೋಷಿಸಿಲ್ಲ.ಆದರೆ, ಜನವರಿ ಮೊದಲ ವಾರದಲ್ಲಿ ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಸಂಸ್ಥೆ ಘೋಷಣೆ ಮಾಡುವ ನಿರೀಕ್ಷೆಯಿದೆ.

ಆಡಳಿತಾರೂಢ ಆಮ್ ಆದ್ಮಿ ಪಕ್ಷ ತನ್ನ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದು, ಕೇಂದ್ರಾಡಳಿತ ಪ್ರದೇಶದ ಎಲ್ಲಾ 70 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಡಿಸೆಂಬರ್ 2 ರಂದು , ಅವಧ್ ಓಜಾ ಅವರುದೆಹಲಿಯಲ್ಲಿ ಮಾಜಿ ದೆಹಲಿ ಸಿಎಂ ಮತ್ತು ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದರು. ಅವರು ಎಎಪಿಗೆ ಸೇರಿದ ಕೆಲವೇ ದಿನಗಳಲ್ಲಿ, ಓಜಾ ಅವರನ್ನು ಪಕ್ಷದ ಎರಡನೇ ಪಟ್ಟಿಯಲ್ಲಿ ಪಟ್ಪರ್ಗಂಜ್ ಅಭ್ಯರ್ಥಿಯಾಗಿ ಹೆಸರಿಸಲಾಯಿತು.

ಈ ಸುದ್ದಿಯನ್ನೂ ಓದಿ : Arvind Kejriwal: ದಿಲ್ಲಿಯ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ? ರೇಸ್‌ನಲ್ಲಿದೆ ಹಲವರ ಹೆಸರು