Tuesday, 13th May 2025

ಸುರಂಗ ಮಾರ್ಗವು ಅಟಲ್ ಬಿಹಾರಿ ವಾಜಪೇಯಿ ಕನಸನ್ನು ನನಸು ಮಾಡಿದೆ: ಮೋದಿ

ನವದೆಹಲಿ: ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಕಣಿವೆಗೆ ಸಂಪರ್ಕ ಕಲ್ಪಿಸುವ ಮನಾಲಿಗೆ ಸಂಪರ್ಕ ಕಲ್ಪಿಸುವ ಅಟಲ್ ಸುರಂಗ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗಡಿ ಮೂಲಸೌಕರ್ಯ ಅಭಿವೃದ್ಧಿಯಿಂದ ಜನಸಾಮಾನ್ಯರಿಗೆ, ಸೇನೆಗೆ ಅನುಕೂಲವಾಗಲಿದೆ. ಈ ಸುರಂಗ ಮಾರ್ಗ ಭಾರತೀಯ ಜನತಾ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಕನಸನ್ನು ನನಸು ಮಾಡಿದೆ ಮಾತ್ರವಲ್ಲ, ಹಿಮಾಚಲ ಪ್ರದೇಶದ ಜನರ ದಶಕಗಳ ಆಸೆಯನ್ನ ಅಂತ್ಯಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸೇತುವೆಗಳು, ಸುರಂಗಗಳು ಅಥವಾ ರಸ್ತೆ ನಿರ್ಮಾಣವೇ ಇರಲಿ ಗಡಿ ಮೂಲಸೌಕರ್ಯಗಳ ಅಭಿವೃದ್ಧಿಯು ಸಾಮಾನ್ಯ ಜನರಿಗೆ ಮಾತ್ರವಲ್ಲದೆ, ಮಿಲಿಟರಿಗೆ ಸಹಾಯ ಮಾಡಲಿದೆ ಎಂದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿರುವ ಅಟಲ್ ಸುರಂಗ ಮಾರ್ಗವು ಮನಾಲಿ ಮತ್ತು ಲೇಹ್ ನಡುವಿನ ರಸ್ತೆ ಅಂತರವನ್ನ 46ಕಿ.ಮೀ.ಗೆ ಕಡಿಮೆ ಮಾಡು ತ್ತದೆ ಮತ್ತು ಪ್ರಯಾಣದ ಸಮಯವನ್ನು ಸುಮಾರು ನಾಲ್ಕರಿಂದ ಐದು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಹಿಮಾಲಯದ ಪೀರ್ ಪಂಜಾಲ್ ಶ್ರೇಣಿಯಲ್ಲಿ ಅತ್ಯಾಧುನಿಕ ವಿಶೇಷತೆಗಳೊಂದಿಗೆ ಈ ಸುರಂಗವನ್ನು ನಿರ್ಮಿಸಲಾಗಿದ್ದು, ಸಮುದ್ರ ಮಟ್ಟದಿಂದ 3,000 ಮೀಟರ್ ಎತ್ತರದಲ್ಲಿದೆ.

ಮುಖ್ಯಮಂತ್ರಿ ಜೈರಾಮ್ ಠಾಕೂರ್, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಅನುರಾಗ್ ಸಿಂಗ್ ಠಾಕೂರ್, ಬಾರ್ಡರ್ ರೋಡ್ ಆರ್ಗನೈಸೇಷನ್ ನ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಉಪಸ್ಥಿತ ರಿದ್ದರು.

Leave a Reply

Your email address will not be published. Required fields are marked *