ದಿಸ್ಪುರ: ಅಸ್ಸಾಂನ (Assam) ಗುವಹಟಿಯ ದೇವಸ್ಥಾನದ ಆವರಣದಲ್ಲೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ(Assam Horror) ನಡೆಸಿದ ಘಟನೆ ವರದಿಯಾಗಿದೆ. ಇನ್ನು ಈ ಹೀನ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಮಾಹಿತಿ ಪಡೆದ ಅಸ್ಸಾಂ ಪೊಲೀಸರು 24 ಗಂಟೆಗಳಲ್ಲಿ ಒಂಬತ್ತು ಆರೋಪಿಗಳಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದಾರೆ(Physical Abuse)
ನವೆಂಬರ್ 17 ರಂದು ಗಾರ್ಚುಕ್ ಪೊಲೀಸ್ ಠಾಣೆಯ ವ್ಯಾಪ್ತಿಯ ಏಕಾಂತ ಸ್ಥಳದಲ್ಲಿ ರಾಸ್ ಹಬ್ಬದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡಿಸಿಪಿ (ಪಶ್ಚಿಮ) ಪದ್ಮನಾಭ್ ಬರುವಾ ತಿಳಿಸಿದ್ದಾರೆ.
ಒಬ್ಬ ಆರೋಪಿ ಮಹಿಳೆಯನ್ನು ಬೋರಗಾಂವ್‌ನಲ್ಲಿರುವ ಘಟನಾ ಸ್ಥಳಕ್ಕೆ ಕರೆದೊಯ್ಯುವ ಮೊದಲು ತನ್ನ ವಾಸಸ್ಥಳಕ್ಕೆ ಕರೆದೊಯ್ದದಿದ್ದ ಎಂದು ತಿಳಿದು ಬಂದಿದೆ. ನಂತರ ಘಟನಾ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಘಟನೆಯಲ್ಲಿ ಒಟ್ಟು 9 ಜನರಿದ್ದು, ಒಬ್ಬ ಅತ್ಯಾಚಾರ ನಡೆಸಿದ ವಿಡಿಯೋ ಚಿತ್ರೀಕರಣ ಮಾಡಿದ್ದ ಎಂಬುದು ತಿಳಿದು ಬಂದಿದೆ.
ಬಂಧಿತರನನ್ನು ಕುಲದೀಪ್ ನಾಥ್ (23), ಬಿಜೋಯ್ ರಾಭಾ (22), ಪಿಂಕು ದಾಸ್ (18), ಗಗನ್ ದಾಸ್ (21), ಸೌರವ್ ಬೋರೊ (20), ಮೃಣಾಲ್ ರಭಾ (19), ರಬಿನ್ ದಾಸ್ (23) ಮತ್ತು ದೀಪಂಕರ್ ಮುಖಿಯಾ (21) ಎಂದು ತಿಳಿದು ಬಂದಿದೆ. ಬಂಧಿತರನ್ನು ವಿಚಾರಣೆ ನಡೆಸಿದಾಗ ಅವರು ಮದ್ಯ ಮತ್ತು ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತರು ಸೇರಿದಂತೆ ಇನ್ನೂ ಕೆಲ ಯುವಕರು ಘಟನೆ ನಡೆದ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಲು ಆಗಾಗ ಅಲ್ಲಿ ಸೇರುತ್ತಿದ್ದರು ಎನ್ನಲಾಗಿದೆ.
ಘಟನೆಯ ಬಗ್ಗೆ ಮಾತನಾಡಿದ ಡಿಸಿಪಿ ಪದ್ಮನಾಭ್ ಬರುವಾ ಸಂತ್ರಸ್ತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ನಮ್ಮ ತನಿಖೆ ನಡೆಯುತ್ತಿದೆ. ಶಂಕಿತರ ವಿರುದ್ಧ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ. ಅವರ ಮುಖಗಳು ಸ್ಪಷ್ಟವಾಗಿ ಗೋಚರಿಸುವುದರಿಂದ ಅದೇ ದೊಡ್ಡ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ.
ಗರ್ಚುಕ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮಯೂರ್ಜಿತ್ ಗೊಗೊಯ್ ಅವರು ಶುಕ್ರವಾರ ಬೆಳಗಿನ ಜಾವ 2:30 ರ ಸುಮಾರಿಗೆ ಸ್ಥಳೀಯ ಮಾಧ್ಯಮವೊಂದರಲ್ಲಿ ವರದಿಯಾದ ನಂತರ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಮಾಹಿತಿ ಮತ್ತು ವೀಡಿಯೋ ವಿಶ್ಲೇಷಣೆಯನ್ನು ಅನುಸರಿಸಿ ಪೊಲೀಸ್ ತಂಡವು ತಕ್ಷಣವೇ ಗಾರ್ಚುಕ್ ಮತ್ತು ಜಲುಕ್ಬರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿತು. ಆರಂಭದಲ್ಲಿ, ಇಬ್ಬರು ಶಂಕಿತರನ್ನು ಬಂಧಿಸಲಾಗಿತ್ತು. ನಂತರ ಬಂಧಿತರು ನೀಡಿದ ಮಾಹಿತಿ ಪ್ರಕಾರ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿ ಇತರ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಕೆಲವರು ರಸ್ತೆ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Police Suspended: ಅಪರಾಧಗಳಿಗೆ ಕುಮ್ಮಕ್ಕು; ಪಾವಗಡದ ಮೂವರು ಪೊಲೀಸ್ ಪೇದೆಗಳು ಸಸ್ಪೆಂಡ್