Wednesday, 14th May 2025

ಐರನ್ ಫೋಲಿಕ್ ಆಸಿಡ್ ಮಾತ್ರೆ ಸೇವಿಸಿ 50 ವಿದ್ಯಾರ್ಥಿಗಳು ಅಸ್ವಸ್ಥ

ಸ್ಸಾಂ: ಅಸ್ಸಾಂನ ಚರೈಡಿಯೊ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತರು ನೀಡಿದ ಐರನ್ ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿದ ಎರಡು ಶಾಲೆಗಳ ಒಟ್ಟು 50 ವಿದ್ಯಾರ್ಥಿ ಗಳು ಅಸ್ವಸ್ಥರಾಗಿದ್ದಾರೆ.

ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಸೋನಾರಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಂತರ ಡಿಸ್ಚಾರ್ಜ್‌ ಮಾಡಲಾಗಿದೆ.

ಆರೋಗ್ಯ ಕಾರ್ಯಕರ್ತರ ತಂಡವು ಖೇರಾನಿಪಥರ್ ಕಿರಿಯ ಪ್ರಾಥಮಿಕ ಶಾಲೆಯ 75 ವಿದ್ಯಾರ್ಥಿಗಳಿಗೆ ಮತ್ತು ನಿಮಾಲಿಯಾ ಕಿರಿಯ ಪ್ರಾಥಮಿಕ ಶಾಲೆಯ 26 ವಿದ್ಯಾರ್ಥಿಗಳಿಗೆ ಐಎಫ್‌ಎ ನೀಡಲಾಗಿತ್ತು. ಶಿಕ್ಷಕರ ಸಮ್ಮುಖದಲ್ಲಿ ಮಾತ್ರೆಗಳನ್ನು ವಿತರಿಸ ಲಾಗಿದ್ದು, ಖಾಲಿ ಹೊಟ್ಟೆಯಲ್ಲಿ ಸೇವಿಸದಂತೆ ಮಕ್ಕಳಿಗೆ ಸೂಚಿಸಲಾಗಿದೆ.

ಸ್ವಲ್ಪ ಹೊತ್ತಿನ ನಂತರ ಪ್ರತಿ ಶಾಲೆಯಿಂದ ಇಬ್ಬರು ಮಕ್ಕಳಿಗೆ ವಾಂತಿಭೇದಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ನಂತರ, ಇನ್ನೂ 48 ಮಕ್ಕಳನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಐಎಫ್‌ಎ ಮಾತ್ರೆಗಳನ್ನು ಸರ್ಕಾರವು ಐರನ್-ಫೋಲಿಕ್ ಆಸಿಡ್ ಪೂರಕವಾಗಿ ಮಕ್ಕಳಿಗೆ ನೀಡಲಾಗುತ್ತದೆ.