ದೀಪಿಕಾ ಪಡುಕೋಣೆ ಅಭಿನಯದ ಇತ್ತೀಚಿನ ಟಿವಿಸಿ ಯು ಏಷ್ಯನ್ ಪೇಂಟ್ಸ್ ರಾಯಲ್ ಗ್ಲಿಟ್ಜ್ ಮೇಲೆ ಬೆಳಕು ಚೆಲ್ಲುತ್ತದೆ
ನವದೆಹಲಿ: ಹೊಳೆಯುವುದೆಲ್ಲವೂ ಚಿನ್ನವಾಗದಿರಬಹುದು, ಆದರೆ ಅದು ಖಂಡಿತವಾಗಿಯೂ ಗಮನವನ್ನು ಸೆಳೆಯುತ್ತದೆ. ಏಷ್ಯನ್ ಪೇಂಟ್ಸ್, ಭಾರತದ ಅತಿ ದೊಡ್ಡ ಪೇಂಟ್ ಮತ್ತು ಡೆಕೋರ್ ಕಂಪನಿಯು ರಾಯಲ್ ಗ್ಲಿಟ್ಜ್ ಎಂಬ ಹೊಸ ಐಷಾರಾಮಿ ಪೇಂಟ್ ಕೊಡುಗೆಯನ್ನು ಬಿಡುಗಡೆ ಮಾಡಿದೆ – ಇದು ಐಷಾರಾಮಿ ಒಳಾಂಗಣ ಗೋಡೆಯ ಪೇಂಟ್ ಆಗಿದ್ದು ಅದು ನಿಮ್ಮ ಮನೆಯ ಮೋಹಕತೆಯನ್ನು ಹೆಚ್ಚಿಸುತ್ತದೆ.
ಟೆಫ್ಲಾನ್™ ಐಷಾರಾಮಿ ಮೇಲ್ಮೈ ರಕ್ಷಕವನ್ನು ಹೊಂದಿದ ಐಷಾರಾಮಿ ಪೇಂಟ್ ಗೋಡೆಗಳ ಮೇಲಿನ ಕಲೆಗಳು ಸುಲಭವಾಗಿ ಅಳಿಸುಹೋಗುವುದನ್ನು ಖಾತ್ರಿಪಡಿಸುತ್ತದೆ. ಹೊಸ ರಾಯಲ್ ಗ್ಲಿಟ್ಜ್ನ ಅಲ್ಟಾç-ಶೀನ್ ನಿಮ್ಮ ಮನೆಯ ಗೋಡೆಗಳಿಗೆ ನೀಡುವ ವೈಭವೋಪೇತ ಮತ್ತು ಹೊಳೆಯುವ ಫಿನಿಶ್, ತಕ್ಷಣವೇ ಹೇಳುತ್ತದೆ ಮತ್ತು ನಿಸ್ಸಂದೇಹ ವಾಗಿ ನಿಮ್ಮ ಮನಸ್ಸನ್ನು ಕದಿಯುತ್ತದೆ #StealYourSpotlight.
ಸುಂದರ ಮತ್ತು ಚಮತ್ಕಾರಿ ದೂರದರ್ಶನ ಜಾಹೀರಾತುಗಳನ್ನು ರಚಿಸುವುದಕ್ಕೆ ಹೆಸರುವಾಸಿಯಾಗಿರುವ, ರಾಯಲ್ ಗ್ಲಿಟ್ಜ್ಗಾಗಿನ ಏಷಿಯನ್ ಪೇಂಟ್ಸ್ನ ಇತ್ತೀಚಿನ ಟಿವಿಸಿ ಯು ನಿರೀಕ್ಷೆಗಳನ್ನು ಪೂರೈಸುತ್ತದೆ. ಹಿನ್ನೆಲೆಯಲ್ಲಿ ಆಧುನಿಕ ಸಂಗೀತ ಸಂಯೋಜನೆಯಲ್ಲಿ ಬಾರ್ ಬಾರ್ ದೇಖೋ ಎಂಬ ಕ್ಲಾಸಿಕ್ ಹಾಡು ನುಡಿಯುತ್ತಿದ್ದು, ಆಶ್ಚರ್ಯ ಗೊಂಡಂತೆ ಕಾಣುತ್ತಿರುವ ದೀಪಿಕಾರಿಂದ ಈ ಹೊಸ ಪೇಂಟ್ ಗಮನವನ್ನು ಹೇಗೆ ದೂರ ಸೆಳೆದಿದೆ ಎಂಬುದನ್ನು ಈ ಜಾಹೀರಾತು ತೋರಿಸುತ್ತದೆ.
ದೀಪಿಕಾ ಪಡುಕೋಣೆಯಿಂದ ದೂರಕ್ಕೆ ಗಮನವನ್ನು ಯಶಸ್ವಿಯಾಗಿ ಸೆಳೆದಿದ್ದೇವೆಂದು ಬಹಳ ಜನರು ಹೆಮ್ಮೆ ಪಡಲು ಸಾಧ್ಯವಿಲ್ಲ. ಆದಾಗ್ಯೂ, ಮನೆಯಲ್ಲಿ ಫೋಟೋ ಶೂಟ್ ಮಾಡುವಾಗ ಅದೇ ನಡೆಯುತ್ತದೆ. ಆಕೆಯ ಬೆರಗು ಗೊಳಿಸುವ ಅಲಂಕಾರದಲ್ಲಿರುವ ಬಾಲಿವುಡ್ ಐಕಾನ್ ನ ಆ ದಿನದ ಅತ್ಯುತ್ತಮ ಕ್ಲಿಕ್ ಗಳನ್ನು ಮಾಡುವ ಸಮಯದಲ್ಲಿ ಛಾಯಾಗ್ರಾಹಕನು ವಿಚಿತ್ರವಾಗಿ ವಿಚಲಿತ ರಾದಂತೆ ತೋರುತ್ತದೆ. ಅವನ ಗಮನ ಬೇರೆ ಯಾವುದರ ಮೇಲೆಯೋ ಇದ್ದು, ವಿಚಾರಣೆ ಮಾಡಿದಾಗ, ಅಲ್ಟಾç ಶೀನ್ -ರಾಯಲ್ ಗ್ಲಿಟ್ಜ್ ಬಣ್ಣ ಬಳಿದ ಹಿನ್ನೆಲೆ ‘ಗೋಡೆ’ ಯು ಆತನ ಗಮನ ಸೆಳೆದಿರುವುದು ಎಂದು ತಿಳಿದು ದೀಪಿಕಾ ಬೆರಗಾ ಗುತ್ತಾಳೆ!
ಹೊಸ ಬಿಡುಗಡೆಯು ಬಗ್ಗೆ ಮಾತನಾಡುತ್ತಾ, ಏಶಿಯನ್ ಪೇಂಟ್ಸ್ ಲಿಮಿಟೆಡ್ ನ ಎಂಡಿ ಮತ್ತು ಸಿಇಒ ಅಮಿತ್ ಸಿಂಗಾಲ್ ಹೇಳಿದರು, “ಅವರ ಮನೆಯ ಸೌಂದರ್ಯ ಮತ್ತು ಮೋಹಕತೆಯ ಅಂಶವನ್ನು ಹೆಚ್ಚಿಸುತ್ತಲೇ ಒಂದು ಸ್ಮರಣೀಯ ಮತ್ತು ನಿರ್ಣಾಯಕ ಪ್ರಭಾವವನ್ನು ಸೃಷ್ಟಿಸುವ ಆ ಘಿ ಫ್ಯಾಕ್ಟರ್ ಅನ್ನು ಗ್ರಾಹಕರು ಇಂದು ತಮ್ಮ ಮನೆಯ ಒಳಾಂಗಣದಲ್ಲಿ ಹುಡುಕುತ್ತಿದ್ದಾರೆ. ಹೊಸ ಏಷ್ಯನ್ ಪೇಂಟ್ಸ್ ರಾಯಲ್ ಗ್ಲಿಟ್ಜ್ ಒಳಾಂಗಣ ಐಷಾರಾಮಿ ಪೇಂಟ್‌ನೊAದಿಗೆ ಇದನ್ನೇ ನಾವು ನಮ್ಮ ಗ್ರಾಹಕರಿಗೆ ತರುತ್ತಿದ್ದೇವೆ ಹಾಗೂ ನಮ್ಮ ಟಿವಿಸಿ ಮೂಲಕ ಅದನ್ನೇ ತಿಳಿಸಲು ಪ್ರಯತ್ನಿಸಿದ್ದೇವೆ. ಈ ಟಿವಿಸಿಯಲ್ಲಿ ಮತ್ತೊಮ್ಮೆ ದೀಪಿಕಾ ರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ, ಅವರು ಈ ಹಿಂದೆ ಏಷ್ಯನ್ ಪೇಂಟ್ಸ್ನೊAದಿಗೆ ಮಾಡಿದ್ದಕ್ಕಿಂತ ಇದರ ಪರಿಕಲ್ಪನೆ ಮತ್ತು ಉಪಚಾರಗಳು ಭಿನ್ನವಾಗಿವೆ.
ರಾಯಲ್ ಗ್ಲಿಟ್ಜ್ ಒಂದು ಐಷಾರಾಮಿ ಒಳಾಂಗಣ ಬಣ್ಣವಾಗಿದ್ದು ಇದು ಐಷಾರಾಮಿ ಅಲ್ಟಾç-ಶೀನ್ ಫಿನಿಶ್ ನೀಡುತ್ತದೆ. ಇದು ಗ್ರಾಹಕರ ಮನೆಗಳಿಗೆ ಗ್ಲಾಮರ್ ಮತ್ತು ಐಷಾರಾಮಿಗಳ ವಿಶಿಷ್ಟ ಅಂಶವನ್ನು ಸೇರಿಸುತ್ತದೆ. ರಾಯಲ್ ಗ್ಲಿಟ್ಜ್ ಎನ್ನುವುದು ಅಲಂಕಾರ ಮತ್ತು ಕಾರ್ಯಕ್ಷಮತೆಯ ಸಂಯೋಜನೆಯಾಗಿದ್ದು, ಟೆಫ್ಲಾನ್ ನೊಂದಿಗೆ ಐಷಾರಾಮಿಯನ್ನು ಅನುಭವಿಸಲು ಪ್ರತಿಯೊಬ್ಬರನ್ನೂ ಆಹ್ವಾನಿಸಿಸುತ್ತದೆ. ಇದು ರಾಯಲ್ ಡಿಸೈನರ್ ಪ್ಯಾಲೆಟ್ ಅಡಿಯಲ್ಲಿ ಡಿಸೈನರ್ ಬಣ್ಣಗಳನ್ನು ನೀಡುತ್ತದೆ. ಅತ್ಯುತ್ತಮ ವಿನ್ಯಾಸಕಾರರ ಮನೋಭಾವಗಳು ಈ ಬಣ್ಣಗಳನ್ನು ಪ್ರತ್ಯೇಕವಾಗಿ ತಯಾರಿಸಿದ್ದು, ಗ್ರಾಹಕರ ಮನೆಗಳಿಗೆ ಐಷಾರಾಮಿ ಅತ್ಯಾಧುನಿಕ ನೋಟವನ್ನು ನೀಡುತ್ತದೆ. ಈ ಬಣ್ಣಗಳು ಭಾರತದ ಮುಖ್ಯವಾಹಿನಿಯ ಕಥೆಯಿಂದ ಸ್ಫೂರ್ತಿ ಪಡೆದಿವೆ ಮತ್ತು ಭಾರತೀಯ ಸಂಸ್ಕöÈತಿಯನ್ನು ಪ್ರತಿಬಿಂಬಿಸುವ ಹೆಸರುಗಳನ್ನು ಹೊಂದಿವೆ – ಅವುಗಳಲ್ಲಿ ಹೆಸರಿಸಲು ಕೆಲವೆಂದರೆ ಚಟ್ನಿ ಗ್ರೀನ್, ಕಲ್ಕತ್ತಾ ರೈನ್ಸ್, ಕೋರಮಂಡಲ್ ಇಂಡಿಗೋ.
ಏಷ್ಯನ್ ಪೇಂಟ್ಸ್ ಲಿಮಿಟೆಡ್ ಕುರಿತು: ೧೯೪೨ ರಲ್ಲಿ ಸ್ಥಾಪನೆಯಾದಾಗಿನಿಂದ, ೨೧೭ ಬಿಲಿಯನ್ ರೂ.ಗಳ ವಹಿವಾಟಿನೊಂದಿಗೆ ಏಷ್ಯನ್ ಪೇಂಟ್ಸ್ ಭಾರತದ ಪ್ರಮುಖ ಮತ್ತು ಏಷ್ಯಾದ ಮೂರನೇ ಅತಿದೊಡ್ಡ ಪೇಂಟ್ ಕಂಪನಿಯಾಗುವಲ್ಲಿ ಬಹಳ ದೂರ ಸಾಗಿಬಂದಿದೆ. ಏಷ್ಯನ್ ಪೇಂಟ್ಸ್ ೧೫ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವಿಶ್ವದಾದ್ಯಂತ ೨೬ ಪೇಂಟ್ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದ್ದು, ೬೦ ಕ್ಕೂ ಹೆಚ್ಚು ದೇಶಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.
ಕಲರ್ ಐಡಿಯಾಸ್, ಹೋಂ ಸೊಲ್ಯೂಷನ್ಸ್, ಕಲರ್ ನೆಕ್ಸ್÷್ಟ, ಮತ್ತುಕಿಡ್ಸ್ ವರ್ಲ್ಡ್ ನಂತಹ ಹೊಸ ಪರಿಕಲ್ಪನೆಗಳನ್ನು ಆವಿಷ್ಕರಿಸುವ ಮೂಲಕ ಏಷ್ಯನ್ ಪೇಂಟ್ಸ್ ಭಾರತದಲ್ಲಿ ಯಾವಾಗಲೂ ಪೇಂಟ್ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಏಷ್ಯನ್ ಪೇಂಟ್ಸ್ ಅಲಂಕಾರಿಕ ಮತ್ತು ಕೈಗಾರಿಕಾ ಬಳಕೆಗಾಗಿ ವ್ಯಾಪಕ ಶ್ರೇಣಿಯ ಬಣ್ಣಗಳನ್ನು ತಯಾರಿಸುತ್ತದೆ.
ಕಂಪನಿಯು ಮನೆ ಸುಧಾರಣೆ ಮತ್ತು ಅಲಂಕಾರ ವಿಭಾಗದಲ್ಲಿ ಸಹ ಅಸ್ತಿತ್ವದಲ್ಲಿದ್ದು ಸ್ನಾನದ ಮನೆ ಮತ್ತು ಅಡಿಗೆ ಮನೆಯ ಉತ್ಪನ್ನಗಳನ್ನು ನೀಡುತ್ತದೆ. ಕಂಪನಿಯು ತನ್ನ ಪೋಟ್ಫೋðಲಿಯೊದಲ್ಲಿ ಲೈಟಿಂಗ್, ಫರ್ನಿಶಿಂಗ್ಸ್ ಮತ್ತು ಪೀಠೋಪಕರಣಗಳನ್ನು ಸಹ ಪರಿಚಯಿಸಿದೆ. ಏಷ್ಯನ್ ಪೇಂಟ್ಸ್, ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದಲ್ಲಿ, ಸ್ಯಾನಿಟೈಜರ್ಸ್ ಮತ್ತು ಮೇಲ್ಮೆöÊ ಸೋಂಕುನಿವಾರಕಗಳನ್ನು ನೀಡುತ್ತಿದೆ.