
2022ರ ಏಪ್ರಿಲ್ ಅಥವಾ ಮೇ ವೇಳೆಗೆ ಹರಾಜು ಮಾಡುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ ಎಂದು ಸಂಪರ್ಕ, ಐಟಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.
ಟೆಲಿಕಾಂ ನಿಯಂತ್ರಕವು ತನ್ನ ಶಿಫಾರಸುಗಳನ್ನು ಮುಂದಿನ ವರ್ಷದ ಫೆಬ್ರವರಿ ಅಂತ್ಯದೊಳಗೆ ಅಥವಾ ಮಾರ್ಚ್ ಆರಂಭದಲ್ಲಿ ಕಳುಹಿಸುವ ನಿರೀಕ್ಷೆ ದೂರಸಂಪರ್ಕ ಇಲಾಖೆಗೆ ಇದೆ ಎಂದು ವೈಷ್ಣವ್ ಹೇಳಿ ದ್ದಾರೆ.
ಟೆಲಿಕಾಂ ಕ್ಷೇತ್ರದ ಲಾಭದಾಯಕತೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಈ ವಲಯ ದಲ್ಲಿ ವ್ಯಾಪಕವಾದ ದಾವೆಗಳಿಗೆ ಮೂಲ ಕಾರಣ ನಿಯಂತ್ರಣದ ಸಂಕೀರ್ಣ ರಚನೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.