Thursday, 15th May 2025

ಕಳವು ಪ್ರಕರಣ: 37 ವರ್ಷಗಳ ಬಳಿಕ ಬಂಧನ

ತ್ತನಂತಿಟ್ಟ: ರಬ್ಬರ್‌ ಶೀಟ್‌ ಕಳವು ಪ್ರಕರಣಕ್ಕೆ ಸಂಬಂಧಿಸಿ ಸುಮಾರು 37 ವರ್ಷಗಳ ಬಳಿಕ ಆರೋಪಿಯ ಬಂಧನವಾಗಿದೆ.

ಕಳವು ಮಾಡಿದ ಬಳಿಕ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ದಕ್ಷಿಣ ಕೇರಳದ ವೆಚ್ಚೂಚಿರಾ ಗ್ರಾಮದ ನಿವಾಸಿ ಪೊಡಿಯನ್‌ ಎಂಬವರನ್ನು ಪೊಲೀ ಸರು ಬಂಧಿಸಿದ್ದಾರೆ.

1985ರಲ್ಲಿ ರಬ್ಬರ್‌ ಶೀಟ್‌ ಕಳವು ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ಪೊಡಿಯನ್‌ ಎಲ್ಲಿಯೂ ಕಾಣಸಿಕ್ಕಿರಲಿಲ್ಲ. ಮೊಬೈಲ್‌ ಹೊಂದಿರದಿದ್ದ ಪೊಡಿಯನ್‌ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಆರೋಪಿ ಪೊಡಿಯನ್‌ ಎಲ್ಲಿದ್ದಾರೆಂಬ ಸುಳಿವು ಯಾರಿಗೂ ಇರಲಿಲ್ಲ.

ಕಳ್ಳತನದ ಬಳಿಕ ಸಮೀಪದ ಪದುಪರ ಅರಣ್ಯದಲ್ಲಿ ಅಡಗಿದ್ದ ಆರೋಪಿಯನ್ನು ಸುಳಿವು ಆಧರಿಸಿ ವೆಚ್ಚೂಚಿರಾ ಪೊಲೀಸರು ಬಂಧಿಸಿದ್ದಾರೆ.