Wednesday, 14th May 2025

ನಕಲಿ ಕೇಂದ್ರ ಸಚಿವ, ಮೂವರು ಸಹಚರರ ಬಂಧನ

ವದೆಹಲಿ: ನಕಲಿ ಕೇಂದ್ರ ಸಚಿವ ಮತ್ತು ಆತನ ಸಂಗಡಿಗರನ್ನು ಬಂಧಿಸುವಲ್ಲಿ ದೆಹಲಿ ವಿಶೇಷ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ನಕಲಿ ಕೇಂದ್ರ ಸಚಿವ ಸಂಜಯ್ ತಿವಾರಿ ಹಾಗೂ ಆತನ ಮೂವರು ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ಸಂಜಯ್ ತಿವಾರಿ ಮತ್ತು ಆತನ ಮೂವರು ಸಹಚರರನ್ನು ವಿಶೇಷ ದಳ ಬಂಧಿಸಿದೆ. ಬಂಧಿತ ಸಂಜಯ್ ತಿವಾರಿ ಕೆಲ ವರ್ಷಗಳ ಹಿಂದೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪಿಎ ಎಂಬುದಾಗಿ ನಟಿಸಿ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ.

ಇದೀಗ ಮತ್ತೆ ಕೇಂದ್ರ ಸಚಿವರ ಸೋಗಿನಲ್ಲಿ ಕೆಲವರನ್ನು ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ. ಕೇಂದ್ರ ಸಚಿವರ ಸೋಗಿನಲ್ಲಿ ಸಾಂವಿಧಾನಿಕ ಹುದ್ದೆ ಯಲ್ಲಿರುವ ಅಧಿಕಾರಿಯೊಬ್ಬರಿಗೆ ತಿವಾರಿ ಧಮಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.