Thursday, 15th May 2025

ಗೂಡ್ಸ್‌ ರೈಲು ಡಿಕ್ಕಿಯಾಗಿ ಗಂಡು ಸಿಂಹ ಸಾವು

ಮ್ರೇಲಿ: ಗೂಡ್ಸ್‌ ರೈಲು ಡಿಕ್ಕಿಯಾಗಿ ಗಂಡು ಸಿಂಹ ಸಾವನ್ನಪ್ಪಿದ್ದು ಮತ್ತೊಂದು ಸಿಂಹ ಗಾಯಗೊಂಡ ಘಟನೆ ಜಿಲ್ಲೆಯ ಉಚ್ಚಾಯಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳಿಯ ಬಳಿ 4 ಸಿಂಹಗಳಿದ್ದವು. ತಕ್ಷಣ ತುರ್ತು ಬ್ರೇಕ್‌ ಹಾಕಲಾಗಿದ್ದರೂ, ಒಂದು ಗಂಡು ಸಿಂಹ ಹಳಿಯ ಮೇಲೆ ಬಂದ ಕಾರಣ  ಸ್ಥಳದಲ್ಲೇ ಸಾವನ್ನಪ್ಪಿದೆ. ಸಿಂಹ ತೀರಾ ಹತ್ತಿರ ದಲ್ಲಿದ್ದ ಕಾರಣ ರೈಲನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡಿರುವ ಸಿಂಹವನ್ನು ಚಿಕಿತ್ಸೆಗಾಗಿ ಸಕರ್‌ಬಾಗ್‌ ಮೃಗಾಲಯಕ್ಕೆ ಕರೆದೊಯ್ಯ ಲಾಗಿದೆ ಎಂದು ಆರ್‌ಎಫ್‌ಒ ತಿಳಿಸಿ ದ್ದಾರೆ.

ಹಳಿಗಳನ್ನು ಸರಿಪಡಿಸುವ ಕಾರ್ಯ ಆರಂಭಿಸಲಾಗಿದೆ. ಜತೆಗೆ ಸಿಂಹಗಳ ಓಡಾಟದ ಬಗ್ಗೆ ನಿಗಾ ಇಡುವಂತೆ ರೈಲ್ವೆ ಸೇವಕ್‌ಗೆ ತಿಳಿಸಲಾಗಿದೆ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಪಿಪವಾವ್‌ ಮತ್ತು ರಜುಲಾ ನಗರ ನಡುವಿನ ರೈಲು ದಾರಿ 35 ಕಿಮೀ ಇದೆ. ಇದರ ಬಳಿ ಇರುವ ಗಿರ್‌ ಅರಣ್ಯ ಏಷ್ಯಾದ ಸಿಂಹಗಳಿ ರುವ ಪ್ರಪಂಚದ ಕೊನೆಯ ವಾಸಸ್ಥಾನವಾಗಿದೆ. ಇದು ಶತ್ರುಂಜಿ ಅರಣ್ಯ ವಿಭಾಗಕ್ಕೆ ಸೇರಿದ್ದಾಗಿದೆ. ಇಲ್ಲಿ ಹಲವು ಕಾಲದಿಂದ ಸಿಂಹಗಳು ವಾಸವಿದ್ದು, ಅವು ರೈಲು ಹಳಿಯನ್ನು ದಾಟಿ ಸಾಗುತ್ತವೆ ಎಂದು ವಿಭಾಗೀಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿ ದ್ದಾರೆ.

Leave a Reply

Your email address will not be published. Required fields are marked *