Sunday, 11th May 2025

Amitabh Bachchan : ಒಂದು ಪದ ತಪ್ಪಾಗಿ ಬಳಸಿದ್ದಕ್ಕೆ ಮರಾಠಿ ಭಾಷಿಕರ ಕ್ಷಮೆ ಕೋರಿದ ಅಮಿತಾಭ್ ಬಚ್ಚನ್‌!

Amitabh Bachchan

ನವದೆಹಲಿ: ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ ಮರಾಠಿ ಪದ ‘ಕಚ್ರಾ’ ಅನ್ನು ತಪ್ಪಾಗಿ ಉಚ್ಚರಿಸಿದ್ದ ಸೂಪರ್‌ ಸ್ಟಾರ್ ಅಮಿತಾಭ್ ಬಚ್ಚನ್‌ (Amitabh Bachchan) ಇದೀಗ ಆ ಬಗ್ಗೆ ಮರಾಠಿ ಭಾಷಿಕರ ಕ್ಷಮೆ ಕೋರಿದ್ದಾರೆ. ಗುರುವಾರ, ಕ್ಷಮೆಯಾಚಿಸುವ ಹೊಸ ವೀಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. ಸರಿಯಾದ ರೀತಿಯಲ್ಲಿ ಪದವನ್ನು ಉಚ್ಚರಿಸಿದ್ದಾರೆ.

“ಉಚ್ಚಾರಣೆ ತಪ್ಪಾಗಿರುವ ವೀಡಿಯೊವನ್ನು ಮಾಡಿದ್ದೆ. ಅದನ್ನು ಸರಿಪಡಿಸಿದ್ದೇನೆ. ಕ್ಷಮಿಸಿ.” ಎಂದು ವೀಡಿಯೊದಲ್ಲಿ, ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ, ನಾನು ಕಂಡ ಕಂಡಲ್ಲಿ ಕಸ ಹಾಕುವುದಿಲ್ಲ ಎಂದು ಸಾಮಾಜಿಕ ಜಾಗೃತಿ ಮೂಡಿಸುವ ವೀಡಿಯೊವನ್ನು ಹಂಚಿಕೊಂಡದ್ದೇ. ನಾನು ಮರಾಠಿ ಭಾಷೆಯಲ್ಲಿಯೂ ಅದೇ ಮಾತನ್ನು ಹೇಳಿದ್ದೆ. ಮರಾಠಿಯಲ್ಲಿ ನನ್ನ ಉಚ್ಚಾರಣೆ ಸ್ವಲ್ಪ ತಪ್ಪಾಗಿತ್ತು. ಮರಾಠಿಯಲ್ಲಿ ‘ಕಛ್ರಾ’ ಎಂಬ ಪದವನ್ನು ತಪ್ಪಾಗಿ ಉಚ್ಚರಿಸಿದ್ದೇನೆ. ನನ್ನ ಸ್ನೇಹಿತ ಸುದೇಶ್ ಭೋಸಲೆ ತಪ್ಪು ಉಚ್ಚಾರಣೆಯ ಬಗ್ಗೆ ನನಗೆ ಮಾಹಿತಿ ನೀಡಿದರು. ಆದ್ದರಿಂದ, ನಾನು ಈ ವೀಡಿಯೊವನ್ನು ಮಾಡುತ್ತಿದ್ದೇನೆ, ಈ ಬಾರಿ ಸರಿಯಾದ ಉಚ್ಚಾರಣೆ ಮಾಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಪ್ರಸ್ತುತ ಕೌನ್ ಬನೇಗಾ ಕರೋಡ್‌ಪತಿಯ 16 ನೇ ಸೀಸನ್ ಅನ್ನು ನಡೆಸುತ್ತಿದ್ದಾರೆ. ಈ ಹಿಂದೆ, ಕೌನ್ ಬನೇಗಾ ಕರೋಡ್‌ಪತಿಯ 16 ರ ಮೊದಲ ದಿನದ ಚಿತ್ರೀಕರಣದ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಎಕ್ಸ್ ನಲ್ಲಿ ಚಿತ್ರವನ್ನು ಹಂಚಿಕೊಂಡ ಅವರು, “ದಿನಚರಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಓಟ ನಡೆಯುತ್ತಿದೆ” ಎಂದು ಬರೆದಿದ್ದರು. ಬಿಗ್ ಬಿ ತಮ್ಮ ಬ್ಲಾಗ್‌ನಲ್ಲಿ. ಕೆಬಿಸಿಯ 16ನೇ ಸೀಸನ್ ನ ಮೊದಲ ದಿನ ಎಂದು ಹೇಳಿಕೊಂಡಿದ್ದರು.

2000ನೇ ಇಸವಿಯಲ್ಲಿ ಕೆಬಿಸಿ ಪ್ರಾರಂಭವಾದಾಗಿನಿಂದ ಅಮಿತಾಭ್ ಬಚ್ಚನ್ ಮೂರನೇ ಸೀಸನ್ ಹೊರತುಪಡಿಸಿದರೆ ನಿರೂಪಕರಾಗಿದ್ದಾರೆ. ಮೂರನೇ ಸೀಸನ್ ಅನ್ನು ಸೂಪರ್ ಸ್ಟಾರ್ ಶಾರುಖ್ ಖಾನ್ ನಡೆಸಿಕೊಟ್ಟಿದ್ದರು.

ಇದನ್ನೂ ಓದಿ: KL Rahul : ಕೆ. ಎಲ್ ರಾಹುಲ್ ಬ್ಯಾಟಿಂಗ್‌ನಲ್ಲಿ ಫೇಲ್‌, ಟೆಸ್ಟ್‌ ತಂಡದ ಸ್ಥಾನಕ್ಕೆ ಕುತ್ತು?

Leave a Reply

Your email address will not be published. Required fields are marked *