Sunday, 11th May 2025

Ambani’s Ganesh Chaturthi: ಅಂಬಾನಿ ಮನೆಯಲ್ಲಿ ಅದ್ಧೂರಿ ಗಣೇಶ ಚತುರ್ಥಿ- ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಬಾಲಿವುಡ್‌ ಸೆಲೆಬ್ರಿಟಿಗಳು

Ambani's Ganesh Chaturthi

ಮುಂಬೈ: ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬ(Ambani’s Ganesh Chaturthi)ದ ಸಂಭ್ರಮಾಚರಣೆಯಲ್ಲಿದೆ. ಅಂಬಾನಿ ಕುಟುಂಬ ಕೂಡ ನಿನ್ನೆ ರಾತ್ರಿ ಆಂಟಿಲಿಯಾದಲ್ಲಿ ಅದ್ಧೂರಿ ಗಣೇಶ ಚತುರ್ಥಿಯನ್ನು ಆಯೋಜಿಸಿದೆ. ಗಣೇಶೋತ್ಸವ ಆಚರಣೆಯಲ್ಲಿ ಬಾಲಿವುಡ್‌ನ ಸ್ಟಾರ್‌ಗಳು ಸೆಲೆಬ್ರಿಟಿಗಳು ಮತ್ತು ರಾಜಕೀಯ ಮುಖಂಡರು ಭಾಗವಹಿಸಿ ಸಂಭ್ರಮಿಸಿದರು.

ಇನ್ನು ಆಂಟಿಲಿಯಾದಲ್ಲಿ ಭವ್ಯ ಮಂಟಪ ನಿರ್ಮಿಸಿ ಗಣೇಶನನ್ನು ಕೂರಿಸಲಾಗಿತ್ತು. ಗಣೇಶ ಮಂಟಪದ ಹೊರಗೆ ಭವ್ಯ ಪೆಂಡಾಲ್‌ ಹಾಕಿ ಅತಿಥಿಗಳು ಆಸನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಬಣ್ಣದ ಹೂವುಗಳು, ಬಟ್ಟೆಗಳಿಂದ ಅಲಂಕೃತಗೊಂಡಿದ್ದ ಆ ಸ್ಥಳ ನೋಡುಗರ ಕಣ್ಮನ ಸೆಳೆಯುವಂತಾಗಿತ್ತು.

ಸೋಶಿಯಲ್‌ ಮೀಡಿಯಾದ ನೆಚ್ಚಿನ ಜೋಡಿಗಳಾದ ಕರೀನಾ ಕಪೂರ್ ಸೈಫ್ ಅಲಿ ಖಾನ್ ಮತ್ತು ಕಿಯಾರಾ ಅಡ್ವಾಣಿ ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ನಿನ್ನೆ ರಾತ್ರಿ ಅಂಬಾನಿ ಕುಟುಂಬದ ಗಣೇಶ ಚತುರ್ಥಿ ಆಚರಣೆಯಲ್ಲಿ ಭಾಗವಹಿಸಿದ್ದು, ಪರಸ್ಪರ ಮ್ಯಾಚಿಂಗ್‌ ದಿರಿಸಿನಲ್ಲಿ ಮಿಂಚಿದ್ದಾರೆ. ಕೆಂಪು ಬಣ್ಣದ ಸಾಂಪ್ರದಾಯಿಕ ಬಟ್ಟೆ ಧರಿಸಿದ್ದ ಜೋಡಿ ಎಲ್ಲರ ಗಮನ ಸೆಳೆಯುವಂತಿತ್ತು. ಕರೀನಾ ಕೆಂಪು ಮತ್ತು ಗೋಲ್ಡನ್‌ ಬಣ್ಣದ ಸೂಟ್‌ ಧರಿಸಿದ್ದರೆ, ಸೈಫ್‌ ಆಂಗ್ರಖಾ ಶೈಲಿಯ ಕುರ್ತಾ ಮತ್ತು ವಿಭಿನ್ನ ಶೈಲಿಯ ಧೋತಿಯಲ್ಲಿ ಮಿಂಚಿದ್ದಾರೆ.

ಬಾಲಿವುಡ್‌ನ ಮತ್ತೊಂದು ಕ್ಯೂಟ್‌ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಂಬಾನಿ ಗಣೇಶ ಚತುರ್ಥಿ ಹಬ್ಬದಲ್ಲಿ ಸೊಗಸಾದ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದರು. ಹೂವಿನ ಕಸೂತಿಯ ಪೀಚ್ ಶಾರ್ಟ್ ಕುರ್ತಾ ಮತ್ತು ಬಿಳಿ ಫ್ಲೇರ್ ಪ್ಯಾಂಟ್‌ಗಳನ್ನು ಧರಿಸಿದ್ದರು ಸಿದ್ಧಾರ್ಥ್‌. ಇನ್ನು ಕಿಯಾರಾ ಬಿಳಿ ಗೋಟಾ ಪಟ್ಟಿ-ಕಸೂತಿಯ ಅನಾರ್ಕಲಿ ಸೂಟ್ ಸೆಟ್‌ನಲ್ಲಿ ಮಿಂಚಿದ್ದರು. ಇನ್ನು ಕಾರ್ಯಕ್ರಮದಲ್ಲಿ ಸಲ್ಮಾನ್‌ ಖಾನ್‌, ಅಮಿರ್‌ ಖಾನ್‌, ಸಂಜಯ್‌ ದತ್‌, ರಾಜ್‌ಕುಮಾರ್‌, ಸೋನಂ ಕಪೂರ್‌, ಜೆನಿಲಿಯಾ- ರಿತೇಶ್‌ ದೇಶ್‌ಮುಖ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮೊದಲಾದವರು ಭಾಗವಹಿಸಿದ್ದರು.

ಈ ಸುದ್ದಿಯನ್ನೂ ಓದಿ: DJ Music: ಡಿಜೆ ಬಳಕೆ ಅವಕಾಶ ಗಣೇಶ ಚತುರ್ಥಿಗೂ ಇಲ್ಲ, ಈದ್ ಮಿಲಾದ್‌ಗೂ ಇಲ್ಲ

Leave a Reply

Your email address will not be published. Required fields are marked *