Wednesday, 14th May 2025

ಅಮರನಾಥ ಯಾತ್ರೆ ಒಂದು ದಿನದ ಮಟ್ಟಿಗೆ ಸ್ಥಗಿತ

ಶ್ರೀನಗರ : ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ಬುಧವಾರ ಘೋಷಿಸಿದ್ದಾರೆ.

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಪ್ರತಿಕೂಲ ಹವಾಮಾನ ದಿಂದಾಗಿ, ಎರಡೂ ಬದಿಗಳಿಂದ ಗುಹಾಂತರ ದೇವಾಲಯದ ಕಡೆಗೆ ಯಾತ್ರಾರ್ಥಿಗಳ ಯಾವುದೇ ಚಲನೆಯನ್ನು ಅನುಮತಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಂತರ ಪರಿಶೀಲಿಸಲಾಗುವುದು ಎಂದು ಹೇಳಿದರು.

ಅಮರನಾಥ ಯಾತ್ರೆ 2022 ಜೂನ್ 30 ರಂದು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 65,000 ಕ್ಕೂ ಹೆಚ್ಚು ಯಾತ್ರಿಕರು ತೀರ್ಥಯಾತ್ರೆ ಮಾಡಿದ್ದಾರೆ.

ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಗುಹಾಂತರ ದೇವಾಲಯಕ್ಕೆ ಯಾತ್ರೆಯು ಆಗಸ್ಟ್ 11 ರಂದು ಶ್ರಾವಣ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಕೊನೆಗೊಳ್ಳಲಿದೆ.