Tuesday, 13th May 2025

ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಿಗೆ ಸಮಾನರಲ್ಲ: ಸುಪ್ರೀಂ ಕೋರ್ಟ್

ವದೆಹಲಿ : ಶಸ್ತ್ರಚಿಕಿತ್ಸಾ ವಿಧಾನಗಳ ವಿಷಯದಲ್ಲಿ ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಿಗೆ ಸಮಾನರಲ್ಲ. ಆದ್ದ ರಿಂದ ಸಮಾನ ವೇತನಕ್ಕೆ ಅರ್ಹರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವಿ ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಅಲೋಪತಿ ವೈದ್ಯರು ತುರ್ತು ಕರ್ತವ್ಯಗಳನ್ನು ನಿರ್ವಹಿಸಬೇಕು. ಟ್ರಾಮಾ ಕೇರ್ ಅನ್ನು ಒದಗಿಸಬೇಕು ಎಂದು ಹೇಳಿದೆ.

ಈ ಮೂಲಕ ಎರಡೂ ವರ್ಗಗಳಿಗೆ ವೇತನ ಮತ್ತು ಪ್ರಯೋಜನಗಳನ್ನು ಸಮೀಕರಿಸಿದ ಗುಜರಾತ್ ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದೆ.

ಅಲೋಪತಿ ವೈದ್ಯರು ತುರ್ತು ಕರ್ತವ್ಯಗಳನ್ನು ನಿರ್ವಹಿಸಲು ಮತ್ತು ಟ್ರಾಮಾ ಕೇರ್ ಒದಗಿಸಲು ಅಗತ್ಯವಿದೆ. ಅವರು ಅಭ್ಯಾಸ ಮಾಡುವ ವಿಜ್ಞಾನದ ಸ್ವರೂಪದಿಂದ ಮತ್ತು ವಿಜ್ಞಾನ ಹಾಗೂ ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಪ್ರಗತಿಯೊಂದಿಗೆ ಅಲೋಪತಿ ವೈದ್ಯರು ನಿರ್ವಹಿಸಲು ಸಮರ್ಥರಾಗಿರುವ ತುರ್ತು ಕರ್ತವ್ಯ ಮತ್ತು ಅವರು ನೀಡುವ ಸಾಮರ್ಥ್ಯವಿರುವ ಆಘಾತ ಆರೈಕೆಯನ್ನು ಆಯುರ್ವೇದ ವೈದ್ಯರಿಂದ ನಿರ್ವಹಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಆಯುರ್ವೇದ ವೈದ್ಯರು ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಶಸ್ತ್ರಚಿಕಿತ್ಸಕರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ ಎಬಿಬಿಎಸ್ ವೈದ್ಯರು ಸಹಾಯ ಮಾಡಬಹುದು ಎಂದು ಹೇಳಿದೆ.

ವೈದ್ಯರು ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಒಪಿಡಿಗಳನ್ನು ಉಲ್ಲೇಖಿಸಿ, ಸರ್ವೋಚ್ಚ ನ್ಯಾಯಾಲಯದ ಪೀಠವು, ಎರಡೂ ವರ್ಗದ ವೈದ್ಯರು ಸಮಾನ ವೇತನಕ್ಕೆ ಅರ್ಹರಾಗಲು ಸಮಾನ ಕೆಲಸವನ್ನು ನಿರ್ವಹಿಸುತ್ತಿಲ್ಲ ಎಂಬ ಅಂಶವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ ಎಂದೇಳಿದೆ.