Monday, 12th May 2025

Allu Arjun: ಅಲ್ಲು ಅರ್ಜುನ್‌ ಮನೆ ಬಳಿ ಗಲಾಟೆ ಮಾಡಿದ್ದ ಆರೋಪಿಗಳಿಗೆ ಜಾಮೀನು

Allu Arjun

ಹೈದರಾಬಾದ್‌: ಭಾನುವಾರ ನಟ ಅಲ್ಲು ಅರ್ಜುನ್‌ (Allu Arjun) ಅವರ ಹೈದರಾಬಾದ್‌ನಲ್ಲಿರುವ ಜುಬಿಲಿ ಹಿಲ್ಸ್‌ನಲ್ಲಿರುವ ನಿವಾಸದ ಮೇಲೆ ಪುಂಡರು ದಾಳಿ ನಡೆಸಿ ದಾಂಧಲೆ ಸೃಷ್ಟಿಸಿದ್ದರು. ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಗೆ ನ್ಯಾಯಕೊಡಿಸಬೇಕೆಂದು ಅವರು ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. (Hyderabad stampede)

ಗಲಾಟೆಯ ನಂತರ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಸೋಮವಾರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಹೈದರಾಬಾದ್‌ನ ಪಶ್ಚಿಮ ವಲಯದ ಡಿಸಿಪಿ ಪ್ರಕಾರ, ಕೆಲವು ವ್ಯಕ್ತಿಗಳು ತಮ್ಮ ಕೈಯಲ್ಲಿ ಫಲಕಗಳನ್ನು ಹಿಡಿದುಕೊಂಡು ಜುಬಿಲಿ ಹಿಲ್ಸ್‌ನಲ್ಲಿರುವ ನಟ ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಭಾನುವಾರ ಸಂಜೆ ಕೆಲ ದುಷ್ಕರ್ಮಿಗಳು ಧಾವಿಸಿ ಘೋಷಣೆ ಕೂಗಲು ಪ್ರಾರಂಭಿಸಿದರು. ಅವರಲ್ಲಿ ಒಬ್ಬ ಕಾಂಪೌಂಡ್ ಏರಿ ಟೊಮೆಟೊಗಳನ್ನು ಎಸೆಯಲು ಪ್ರಾರಂಭಿಸಿದ. ತಮ್ಮನ್ನು ತಾವು ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ (OU-JAC) ಭಾಗವೆಂದು ಹೇಳಿಕೊಂಡಿದ್ದರು. ನಂತರ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಡಿಸೆಂಬರ್ 4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪಾ 2 ಪ್ರಥಮ ಪ್ರದರ್ಶನದ ವೇಳೆ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರೆ, ಅವರ ಮಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಚಿತ್ರ ಪ್ರದರ್ಶನದ ವೇಳೆ ದಿಢೀರ್‌ ಥಿಯೇಟರ್‌ಗೆ ಅಲ್ಲು ಅರ್ಜುನ್‌ ಬಂದಿದ್ದು, ಅವರನ್ನು ನೋಡಲು ಜನಸ್ಥೋಮವೇ ಸೇರಿತ್ತು. ಆಗ ಈ ಕಾಲ್ತುಳಿತ ಸಂಭವಿಸಿತ್ತು.

ಘಟನೆಯ ನಂತರ ಅಲ್ಲು ಅರ್ಜುನ್‌ ಅವರನ್ನು ಹೈದರಾಬಾದ್‌ ಪೊಲೀಸರು ಅವರ ನಿವಸದಲ್ಲಿಯೇ ಬಂಧಿಸಿದ್ದರು. ನಂತರ ಕೆಳ ಹಂತದ ನ್ಯಾಯಾಲಯ 14 ದಿನಗಳ ನ್ಯಾಯಂಗ ಬಂಧನಕ್ಕೆ ತೀರ್ಪು ನೀಡಿತ್ತು. ಆದರೆ ಹೈಕೋರ್ಟ್‌ ಆ ಆದೇಶವನ್ನು ರದ್ದುಗೊಳಿಸಿ ಮಧ್ಯಂತರ ಜಾಮೀನು ನೀಡಿದೆ.

ರಾಜಕೀಯ ತಿರುವು

ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅಲ್ಲು ಅರ್ಜುನ್‌ ಬಗ್ಗೆ ಹೇಳಿದ್ದ ಹೇಳಿಕೆ ಬಾರಿ ವೈರಲ್‌ ಆಗಿತ್ತು ಆತ ಏನು ಸ್ವಾತಂತ್ರ್ಯ ಹೋರಾಟನಲ್ಲ ಎಂದು ಅವರು ಹೇಳಿದ್ದರು. ಆದರೆ ಅಲ್ಲು ನಿವಾಸದ ಬಳಿ ನಡೆದ ಗಲಾಟೆಯ ನಂತರ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ಲೋಪವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ : Allu Arjun: ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ್‌