Monday, 12th May 2025

ಮಹಾರಾಷ್ಟ್ರ ವಿಪಕ್ಷ ನಾಯಕರಾಗಿ ಅಜಿತ್ ಪವಾರ್ ನೇಮಕ

ಮುಂಬೈ : ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಅವರನ್ನು ಸೋಮವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಎಂದು ಘೋಷಿಸಲಾಗಿದೆ.

ಎನ್ಸಿಪಿ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆಯಾದ ಬಳಿಕ ಮಹಾರಾಷ್ಟ್ರ ಸರ್ಕಾರದ ಪ್ರತಿಪಕ್ಷಗಳು ಎಲ್ಲಾ ಕಾರ್ಯ ತಂತ್ರಗಳೊಂದಿಗೆ ಮುಂದುವರಿಯಲಿವೆ.

ಶರದ್ ಪವಾರ್ ಎನ್ಸಿಪಿ ನಾಯಕರೊಂದಿಗೆ ಜಯಂತ್ ಪಾಟೀಲ್, ಅಜಿತ್ ಪವಾರ್ ಅವರೊಂದಿಗೆ ಸಭೆ ನಡೆಸಿ, ಪಕ್ಷದ ಹಿರಿಯ ನಾಯಕರೊಬ್ಬರು ವಿರೋಧ ಪಕ್ಷದ ಮುಖ ವಾಗಬೇಕೆಂದು ಪ್ರತಿಪಕ್ಷಗಳು ಬಯಸಿದ್ದವು.

ಏತನ್ಮಧ್ಯೆ, ಏಕನಾಥ್ ಶಿಂಧೆ ನೇತೃತ್ವದ ಹೊಸ ಸರ್ಕಾರವು ವಿಶ್ವಾಸಮತ ಯಾಚನೆ ಯಲ್ಲಿ 164-99 ಮತಗಳ ಅಂತರದಿಂದ ಜಯಗಳಿಸಿತು. ಇದು ರಾಜ್ಯದ ಮುಖ್ಯಮಂತ್ರಿ ಯಾಗಿ ಮತ್ತು ಶಿವಸೇನೆಯ ನಾಯಕನಾಗಿ ಅವರ ಸ್ಥಾನವನ್ನು ಭದ್ರಪಡಿಸಿತು.

ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕ ಜಯಂತ್ ಪಾಟೀಲ್, ಎಲ್‌ಒಪಿಗೆ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.