Monday, 12th May 2025

ʻಅಗ್ನಿವೀರ್ʼ ನೇಮಕಾತಿ ಪರೀಕ್ಷೆಯಲ್ಲಿ ಅನುತ್ತೀರ್ಣ: ಆತ್ಮಹತ್ಯೆ

ಡೆಹ್ರಾಡೂನ್(ಉತ್ತರಾಖಂಡ್‌): ಪೌರಿ ಗಡ್ವಾಲ್ ಜಿಲ್ಲೆಯಲ್ಲಿ ಸೇನಾ ಆಕಾಂಕ್ಷಿ ಯೊಬ್ಬರು ʻಅಗ್ನಿವೀರ್ʼ ನೇಮಕಾತಿ ಪರೀಕ್ಷೆ ಯಲ್ಲಿ ಉತ್ತೀರ್ಣನಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತನನ್ನು ಸಾತ್ಪುಲಿ ನಿವಾಸಿ ಸುಮಿತ್ ಕುಮಾರ್ ಎಂದು ಗುರುತಿಸಲಾಗಿದೆ. ಕೋಟ್ವಾರ್‌ನಲ್ಲಿ ನಡೆದ ಅಗ್ನಿವೀರ್ ನೇಮ ಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಯಾಗದ ಹಿನ್ನೆಲೆಯಲ್ಲಿ ಸುಮಿತ್ ಅಸಮಾಧಾನಗೊಂಡಿದ್ದರು.

ಮಾಹಿತಿ ಪ್ರಕಾರ, ಸುಮಿತ್ ಕಳೆದ ನಾಲ್ಕು ವರ್ಷಗಳಿಂದ ಸೇನಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಸುಮಿತ್ ಬುಧವಾರ ಪರೀಕ್ಷೆಗೆ ಹಾಜರಾಗಲು ಹೋಗಿದ್ದರು. ಆದರೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದರು. ಇದರಿಂದ ಅಸಮಧಾನ ಗೊಂಡಿದ್ದ ಸುಮಿತ್ ಸಾವಿಗೆ ಶರಣಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.