Wednesday, 14th May 2025

ಟ್ರಕ್-ಬಸ್ ನಡುವೆ ಅಪಘಾತ: ನಾಲ್ವರ ಸಾವು

ವಡೋದರ: ಗುಜರಾತ್‌ನ ವಡೋದರದ ಕಪುರೈ ಸೇತುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಪರಿಣಾಮ ನಾಲ್ವರು ಮೃತ ಪಟ್ಟು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗೋಧಿ ತುಂಬಿದ್ದ ಟ್ರಕ್ ಅನ್ನು ಓವರ್​ಟೇಕ್ ಮಾಡಲು ಬಸ್ ಚಾಲಕ ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಸಂಪೂರ್ಣ ಜಖಂ ಆಗಿದೆ.

ಗಾಯಗೊಂಡ ವರಲ್ಲಿ ಕೆಲವರ ಸ್ಥತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗಾಯಾಳುಗಳನ್ನು ವಡೋದರಾದ ಸಯಾಜಿ ಆಸ್ಪತ್ರೆಗೆ ರವಾನಿಸಲಾಗಿದೆ.

ಐಷಾರಾಮಿ ಬಸ್ ರಾಜಸ್ಥಾನದಿಂದ ಸೂರತ್ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ. ಮೃತರಲ್ಲಿ ಒಂದು ಮಗು, ಮಹಿಳೆ ಮತ್ತು ನಾಲ್ವರು ಪುರುಷರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.