Monday, 12th May 2025

ಸಂಸತ್ ಸಂಕೀರ್ಣದಲ್ಲಿ ರಾಘವ್ ಚಡ್ಡಾ ಮೇಲೆ ಕಾಗೆ ದಾಳಿ: ದೆಹಲಿ ಬಿಜೆಪಿ ಕಮೆಂಟ್

ವದೆಹಲಿ: ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಕೂಡ ಬುಧವಾರ ನಡೆದ ಮುಂಗಾರು ಅಧಿವೇಶನದಲ್ಲಿ ಭಾಗವಹಿ ಸಲು ಆಗಮಿಸಿದ್ದರು. ಆದರೆ ಈ ವೇಲೆ ಸಂಸತ್ ಸಂಕೀರ್ಣದಲ್ಲಿ ಚಡ್ಡಾ ಮೇಲೆ ಕಾಗೆ ದಾಳಿ ಮಾಡಿದೆ.

ಅದರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಚಡ್ಡಾ ಮಾನ್ಸೂನ್ ಅಧಿವೇಶನ ನಡೆಯುತ್ತಿರುವ ಸಂಸತ್ತಿನ ಹೊರಗೆ ಕಾಣಿಸಿಕೊಂಡಿದ್ದಾರೆ. ಅವನು ಫೋನ್’ನಲ್ಲಿ ಮಾತನಾಡುತ್ತಿದ್ದಾಗ ಕಾಗೆ ದಾಳಿ ಮಾಡಿದೆ. ಅದರಿಂದ ತಪ್ಪಿಸಿ ಕೊಳ್ಳಲು ಪ್ರಯತ್ನಿಸಿದ್ದಾರೆ.

ಚಡ್ಡಾ ಅವರ ಮೇಲೆ ಕಾಗೆ ದಾಳಿಯ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಿದ್ದು, ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ಯನ್ನ ನೀಡುತ್ತಿದ್ದಾರೆ. ಏತನ್ಮಧ್ಯೆ, ಭಾರತೀಯ ಜನತಾ ಪಕ್ಷವು ಟ್ವೀಟ್ ಮೂಲಕ ಎಎಪಿ ಸಂಸದರ ಕಾಲೆಳೆದಿದೆ.

ಫೋಟೋವನ್ನ ಹಂಚಿಕೊಂಡಿರುವ ದೆಹಲಿ ಬಿಜೆಪಿ, “ಸುಳ್ಳು ಹೇಳಿದ್ರೆ ಕಾಗೆ ಕುಕ್ಕುತ್ತೆ” (ಝೂಟ್ ಬೋಲೆ ಕವ್ವಾ ಕಾಟೆ) ಎಂದು  ಬರೆದಿದೆ. ಇಲ್ಲಿಯವರೆಗೆ ನಾನು ಅದನ್ನ ಕೇಳಿದ್ದೇನೆ, ಇಂದು ನಾನು ಸಹ ನೋಡಿದೆ” ಎಂದು ಬರೆದಿದೆ.

Leave a Reply

Your email address will not be published. Required fields are marked *