Monday, 12th May 2025

ಕಾರ್ಪೊರೇಷನ್ ಚುನಾವಣೆ: ಪೀಪಿ ಊದಿದ ಆಮ್‌ ಆದ್ಮಿ‌, ಅರಳದ ಬಿಜೆಪಿ

ನವದೆಹಲಿ : ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಐದು ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದ ಆಪ್‌ ಪಕ್ಷದ ಕಾರ್ಯಕರ್ತರಿಗೆ ಮತ್ತು ಜನರಿಗೆ ಅಭಿನಂದನೆ ಸಲ್ಲಿಸಿದ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಬಿಜೆಪಿಯಿಂದ ಜನ ಅಸಂತುಷ್ಟರಾಗಿದ್ದಾರೆ ಎಂದು ಹೇಳಿದರು.

ದೆಹಲಿಯ ಜನರು ಎಎಪಿಯ ಉತ್ತಮ ಆಡಳಿತದ ಮಾದರಿಯನ್ನು ನಂಬು ತ್ತಾರೆ ಎಂದು ಫಲಿತಾಂಶಗಳು ತೋರಿಸುತ್ತವೆ. 2015ರ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ರಲ್ಲಿ, 2020ರಲ್ಲಿ 70 ಸೀಟುಗಳಲ್ಲಿ 62 ರಲ್ಲಿ ನಾವು ಗೆದ್ದಿದ್ದೇವೆ. ಪುರಸಭೆ ಉಪ ಚುನಾವಣೆಯಲ್ಲಿ ಐದರಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಇದು ನಮ್ಮ ಕೆಲಸಗಳಿಂದ ಜನರು ಸಂತೋಷಪಡುತ್ತಾರೆ ಎಂಬುದನ್ನು ತೋರಿಸುತ್ತದೆ’ ಎಂದು ಕೇಜ್ರಿವಾಲ್ ಹೇಳಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಸ್ಥಾನ ಗೆಲ್ಲುವುದಿಲ್ಲ, ನಗರ ಸ್ಥಳೀಯ ಸಂಸ್ಥೆಗಳ ಆಡಳಿತದಿಂದ ಜನತೆ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದರು.

Leave a Reply

Your email address will not be published. Required fields are marked *