ಅಹಮದಾಬಾದ್: ಗುಜರಾತ್ ಚುನಾವಣೆಯಲ್ಲಿ ಕೇಜ್ರಿವಾಲ್ ಅವರ ಎಎಪಿ ಖಾತೆ ತೆರೆಯಲ್ಲ, ಆದರೆ ಬಿಜೆಪಿ ಅಭೂತ ಪೂರ್ವ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪ್ರತಿಯೊಂದು ಪಕ್ಷಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ, ಆದರೆ ಅವರು ಪಕ್ಷವನ್ನು ಸ್ವೀಕರಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಜನರಿಗೆ ಬಿಟ್ಟದ್ದು” ಎಂದು ತಿಳಿಸಿದ್ದಾರೆ.
ಎಎಪಿಯು ಗುಜರಾತ್ನ ಜನರ ಮನಸ್ಸಿನಲ್ಲಿ ಎಲ್ಲಿಯೂ ಇಲ್ಲ. ಚುನಾವಣೆ ಫಲಿತಾಂಶ ಗಳಿಗಾಗಿ ನಿರೀಕ್ಷಿಸಿ, ಬಹುಶಃ ಯಶಸ್ವಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಎಪಿಯ ಹೆಸರು ಕಂಡು ಬರುವುದಿಲ್ಲ” ಅಮಿತ್ ಶಾ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಕುರಿತು ಕೇಳಿದ ಪ್ರಶ್ನೆಗೆ, ರಾಜಕೀಯದಲ್ಲಿ ನಿರಂತರ ಪ್ರಯತ್ನಗಳು ಅತ್ಯಗತ್ಯ ಎಂದು ಶಾ ಹೇಳಿ ದರು.
ರಾಜಕೀಯದಲ್ಲಿ ನಿರಂತರ ಪ್ರಯತ್ನಗಳು ಮಾತ್ರ ಫಲಿತಾಂಶ ವನ್ನು ತೋರಿಸುತ್ತವೆ. ಆದ್ದರಿಂದ ನಾವು ಕಾದು ನೋಡೋಣ,” ಅವರು ಹೇಳಿದರು.