Sunday, 11th May 2025

ಗುಜರಾತ್ ಚುನಾವಣೆ: ಎಎಪಿಯ 21 ಅಭ್ಯರ್ಥಿಗಳ ಪಟ್ಟಿ ಪ್ರಕಟ

ಅಹಮದಾಬಾದ್: ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ(ಎಎಪಿ) ಶನಿವಾರ ತನ್ನ 21 ಅಭ್ಯರ್ಥಿಗಳ 11ನೇ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.
ಆಮ್ ಆದ್ಮಿ ಪಕ್ಷ ಗುಜರಾತ್ ವಿಧಾನಸಭೆ ಚುನಾವಣೆಗೆ ಇದುವರೆಗೆ 139 ಅಭ್ಯರ್ಥಿಗಳನ್ನು ಘೋಷಿಸಿದೆ. ವಾವ್ ಕ್ಷೇತ್ರದಿಂದ ಡಾ.ಭೀಮ್ ಪಟೇಲ್, ವಿರಾಮ್ಗಾಮ್ನಿಂದ ಕುವರ್ಜಿ ಠಾಕೋರ್, ಠಕ್ಕರ್ಬಾಪಾ ನಗರದಿಂದ ಸಂಜಯ್ ಮೋರಿ, ಬಾಪುನಗರದಿಂದ ರಾಜೇಶ್ಭಾಯ್ ದೀಕ್ಷಿತ್, ಧೋಲ್ಕಾದಿಂದ ಜಟುಬಾ ಗೋಲ್ ಮತ್ತು ಧಂಗಧ್ರದಿಂದ ವಾಗ್ಜಿಭಾಯ್ ಪಟೇಲ್ ಅವರನ್ನು ಎಎಪಿ ಕಣಕ್ಕಿಳಿಸಿದೆ.