Thursday, 15th May 2025

9,923 ಮಂದಿಗೆ ಹೊಸದಾಗಿ ಸೊಂಕು ದೃಢ

ನವದೆಹಲಿ : ದೇಶದಲ್ಲಿ ಮಂಗಳವಾರ ಕಳೆದ 24 ಗಂಟೆಯಲ್ಲಿ 9,923 ಮಂದಿಗೆ ಹೊಸದಾಗಿ ಸೊಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 9,923 ಮಂದಿಗೆ ಹೊಸದಾಗಿ ಸೊಂಕು ದೃಢ ಪಟ್ಟಿದೆ. ಸೋಂಕಿನಿಂದ ಕಳೆದ 24 ಗಂಟೆಯಲ್ಲಿ 17 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಮಹಾಮಾರಿಗೆ 524890 ಮಂದಿ ಬಲಿಯಾಗಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 9,923 ಹೊಸ ಪ್ರಕರಣಗಳು, 7,293 ಚೇತರಿಕೆಗಳು ಮತ್ತು 17 ಸಾವುಗಳು ವರದಿಯಾಗಿವೆ.