Thursday, 15th May 2025

ಎಫ್‌ಎಒ 75ನೇ ವಾರ್ಷಿಕೋತ್ಸವ ಅಂಗವಾಗಿ 75ರ ಮುಖಬೆಲೆಯ ನಾಣ್ಯ ಬಿಡುಗಡೆ

ನವದೆಹಲಿ: ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‌ಎಒ)ಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ 75ರ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು.

ಇಂದು ವಿಶ್ವ ಆಹಾರ ದಿನ, ಈ ನಿಟ್ಟಿನಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ ಕಾರ್ಯಕ್ರಮ ಏರ್ಪಡಿಸಿತ್ತು. ಕೃಷಿ ಮತ್ತು ಪೋಷಣೆಗೆ ಸರ್ಕಾರವು ನೀಡಿದ ಹೆಚ್ಚಿನ ಆದ್ಯತೆಯನ್ನು ಇದು ಸೂಚಿಸುತ್ತದೆ. ಹಸಿವು, ಅಪೌಷ್ಟಿಕತೆ ಮತ್ತು ಅಪೌಷ್ಟಿಕತೆಯನ್ನು ಸಂಪೂರ್ಣ ವಾಗಿ ತೊಡೆದುಹಾಕುವ ಸಂಕಲ್ಪದ ಸಾಕ್ಷಿ ಇಂದಿನ ಕಾರ್ಯಕ್ರಮವಾಗಿದೆ.

ಭಾರತೀಯ ನಾಗರಿಕ ಸೇವಾ ಅಧಿಕಾರಿ ಡಾ ಬಿನಯ್ ರಂಜನ್ ಸೇನ್ 1956-57ರಲ್ಲಿ ಎಫ್‌ಎಒದ ಮಹಾ ನಿರ್ದೇಶಕರಾಗಿದ್ದರು. ಪ್ರಸಕ್ತ ವರ್ಷ ನೊಬೆಲ್ ಶಾಂತಿ ಪುರಸ್ಕಾರ ಪಡೆದ ವಿಶ್ವ ಆಹಾರ ಕಾರ್ಯಕ್ರಮವನ್ನು ಅವರ ಸಮಯದಲ್ಲಿಯೇ ಆರಂಭಿಸ ಲಾಯಿತು.

2016ರಲ್ಲಿ ಅಂತಾರಾಷ್ಟ್ರೀಯ ಧಾನ್ಯಗಳ ವರ್ಷ ಮತ್ತು 2023ರಲ್ಲಿ ಅಂತಾರಾಷ್ಟ್ರೀಯ ನವಣೆ ವರ್ಷ ಎಂದು ಆಚರಿಸಬೇಕೆಂದು ಭಾರತ ಮಾಡಿರುವ ಪ್ರಸ್ತಾವನೆ ಹಿಂದೆ ಎಫ್‌ಎಒದ ಪಾತ್ರ ಸಾಕಷ್ಟಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *