Monday, 12th May 2025

72 ಲಕ್ಷ ಟನ್ ಕಲ್ಲಿದ್ದಲಿನ ಸಂಗ್ರಹವಿದೆ: ಕೇಂದ್ರ ಸಚಿವಾಲಯ

ನವದೆಹಲಿ: ದೇಶದಲ್ಲಿ ಇರುವ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸುಮಾರು 72 ಲಕ್ಷ ಟನ್ ಕಲ್ಲಿದ್ದಲಿನ ಸಂಗ್ರಹವಿದೆ. ಕಲ್ಲಿದ್ದಲು ನಿಗಮದಲ್ಲಿ 400 ಲಕ್ಷ ಟನ್ ಕಲ್ಲಿದ್ದಲು ಮಾಡಲಾಗಿದೆ, ವಿದ್ಯುತ್‌ ಅಭಾವ ನಿಭಾಯಿಸುವ ನಿಟ್ಟಿನಲ್ಲಿ ಈ ಕಲ್ಲಿದ್ದಲನ್ನು ಕೂಡ ವಿದ್ಯುತ್‌ ಉತ್ಪಾದನ ಘಟಕಗಳಿಗೆ ಕಳುಹಿಸಿ ಕೊಡಲಾಗುವುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

ಈ ಮೂಲಕ ದೇಶದಲ್ಲಿ ವಿದ್ಯುತ್ ಅಭಾವ ನಿರ್ಮಾಣವಾಗಲಿದೆ ಎನ್ನುವ ಸುದ್ದಿಗಳನ್ನು ಕೇಂದ್ರ ಕಲ್ಲಿದ್ದಲು ಸಚಿವಾಲಯ ನಿರಾಕರಿಸಿದೆ.

ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ಅಂತಾರಾಷ್ಟ್ರೀಯ ಬೆಲೆಯಲ್ಲಿನ ಹೆಚ್ಚಳವು ಅದರ ಕೊರತೆಗೆ ಕಾರಣವಾಗಿದೆ. ದರೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪರಿಸ್ಥಿತಿ ‘ಸರಿಯಾಗಲಿದೆ’ ಎಂದು ಭರವಸೆ ನೀಡಿದ್ದಾರೆ. ನೀವು ಕಳೆದ ಹಲವು ವರ್ಷಗಳಿಂದ ಹೋಲಿಸಿದರೆ, ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆ ಸೆಪ್ಟೆಂಬರ್‌ನಲ್ಲಿ ಮತ್ತು ವಿಶೇಷವಾಗಿ ಅಕ್ಟೋಬರ್‌ನಲ್ಲಿ ಅತ್ಯಧಿಕವಾಗಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *