Tuesday, 13th May 2025

7,145 ಹೊಸ ಕೋವಿಡ್ ಪ್ರಕರಣ ಪತ್ತೆ

#corona

ನವದೆಹಲಿ: ಕಳೆದ 24ಗಂಟೆಗಳಲ್ಲಿ ಭಾರತದಲ್ಲಿ 7,145 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 289 ಮಂದಿ ಕೋವಿಡ್ ನಿಂದ  ಮೃತಪಟ್ಟಿ ದ್ದಾರೆ.

ಈವರೆಗೆ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,47,33,194ಕ್ಕೆ ಏರಿಕೆಯಾಗಿದೆ. ಕೋವಿಡ್ ಸೋಂಕಿನಿಂದ ಒಟ್ಟು 4,77,158 ಮಂದಿ ಮೃತಪಟ್ಟು,   8,706 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. 1,850 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 84,565ಕ್ಕೆ ಇಳಿಕೆಯಾಗಿದೆ.

ಕಳೆದ 24ಗಂಟೆಗಳಲ್ಲಿ 62,06,244 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈವರೆಗೆ 136.66 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.