Thursday, 15th May 2025

6,594 ಕರೋನಾ ಹೊಸ ಪ್ರಕರಣ ದಾಖಲು

#corona

ನವದೆಹಲಿ: ದೇಶದಾದ್ಯಂತ ಮಂಗಳವಾರ 24 ಗಂಟೆಗಳ ಅಂತರದಲ್ಲಿ ಕೋವಿಡ್‌-19 ದೃಢಪಟ್ಟ 6,594 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 50,548ಕ್ಕೆ ಏರಿಕೆಯಾಗಿದೆ.

24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಾಲಿಗೆ 2,553 ಪ್ರಕರಣಗಳು ಸೇರ್ಪಡೆಯಾಗಿವೆ. ಕೋವಿಡ್ ದೃಢ ಪ್ರಮಾಣ ಶೇ.2.05 ರಷ್ಟಿದ್ದು, ವಾರದ ಕೋವಿಡ್‌ ದೃಢ ಪ್ರಮಾಣ ಶೇಕಡ 2.32ರಷ್ಟಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಿಂದ ತಿಳಿದು ಬಂದಿದೆ.

ಕೋವಿಡ್‌ ಒಟ್ಟು ಪ್ರಕರಣಗಳ ಸಂಖ್ಯೆ 4,32,36,695ಕ್ಕೆ ಏರಿಕೆಯಾಗಿದೆ. ಕೊರೊನಾ ವೈರಸ್‌ ಸೋಂಕಿನಿಂದ ಚೇತರಿಸಿ ಕೊಳ್ಳುತ್ತಿರುವವರ ಪ್ರಮಾಣ ಶೇಕಡ 98.67ರಷ್ಟಿದೆ ಹಾಗೂ ಸಾವಿನ ಪ್ರಮಾಣ ಶೇಕಡ 1.21ರಷ್ಟಿದೆ. ದೇಶದಲ್ಲಿ ಒಟ್ಟು 195.35 ಡೋಸ್‌ ಕೋವಿಡ್‌ ಲಸಿಕೆ ಹಾಕಲಾಗಿದೆ.