Thursday, 15th May 2025

ಒಂದು ವಾರದಲ್ಲಿ 625 ಕೋಟಿ ರೂ.ಗಳ ಮದ್ಯ ಮಾರಾಟ..!

ತಿರುವನಂತಪುರಂ: ಓಣಂ ಹಬ್ಬದ ಅವಧಿಯ ಪ್ರಮುಖ ದಿನಗಳಲ್ಲಿ ಒಂದಾದ ತಿರುಓಣಂಗೆ ಒಂದು ದಿನ ಮುಂಚಿತವಾಗಿ ಕೇರಳದಾದ್ಯಂತ 117 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

ಒಂದು ವಾರದಲ್ಲಿ 625 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ರಾಜ್ಯ ಪಾನೀಯಗಳ ನಿಗಮದ ಬಿವರೇಜಸ್ ಕಾರ್ಪೊ ರೇಷನ್ ಅಂಕಿಅಂಶ ತಿಳಿಸಿದೆ. ಮದ್ಯ ಮಾರಾಟ 100 ಕೋಟಿ ದಾಟಿರುವುದು ಬೆವ್ಕೋ ಇತಿಹಾಸದಲ್ಲಿ ಇದೇ ಮೊದಲು. ಕಳೆದ ವರ್ಷ ಮಾರಾಟವು 85 ಕೋಟಿ ರೂ.ಗೆ ತಲುಪಿತ್ತು.

ಕಳೆದ ಕೆಲವು ವರ್ಷಗಳಲ್ಲಿ ಕೇರಳವು ಮದ್ಯದಿಂದ ವಾರ್ಷಿಕ 14,000 ಕೋಟಿ ರೂ. ಮತ್ತು ಲಾಟರಿಯಿಂದ 10,000 ಕೋಟಿ ರೂ. ಆದಾಯ ಗಳಿಸುತ್ತಿದೆ.

ಹತ್ತು ದಿನಗಳ ಹಬ್ಬದ ಸೀಸನ್‌ನಿಂದ ಒಟ್ಟು ಆದಾಯ 700 ಕೋಟಿ ರೂ. ದಾಟುವ ನಿರೀಕ್ಷೆಯಿದೆ.  ಇತ್ತೀಚಿನ ವರ್ಷಗಳ ಆದಾಯ ದಾಖಲೆಗಳು 10 ದಿನಗಳ ಉತ್ಸವದಲ್ಲಿ ಸುಮಾರು 100 ಕೋಟಿ ರೂ. ಗಳಷ್ಟು ಜಿಗಿತ ತೋರಿಸಿದೆ.