Monday, 12th May 2025

ನಕಲಿ ಮದ್ಯ ಸೇವಿಸಿ 6 ಮಂದಿ ಬಲಿ

ರಾಯ್ ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಕಲಿ ಮದ್ಯ ಸೇವಿಸಿ 6 ಮಂದಿ ಬಲಿ, ಹಲವರು ಗಂಭೀರ ಜಿಲ್ಲೆಯ ಪಹರ್‌ಪುರ ಗ್ರಾಮದಲ್ಲಿ ಮದ್ಯ ಸೇವಿಸಿ ಆರು ಮಂದಿ ಮೃತಪಟ್ಟು, ಹಲವರು ಚಿಂತಾಜನಕರಾಗಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ವ್ ಶ್ರೀವಾಸ್ತವ ಅವರು ಪಿಟಿಐಗೆ ಮಂಗಳವಾರ ರಾತ್ರಿ ಗ್ರಾಮದಲ್ಲಿ ಕಾರ್ಯ ಕ್ರಮವೊಂದರಲ್ಲಿ ಜನರು ಮದ್ಯ ಸೇವಿಸಿದ್ದಾರೆ.

ಪಹರಪುರ ಮತ್ತು ಪ್ಯೂರ್ ಚಟ್ಟಾ ಗ್ರಾಮದ ನಾಲ್ವರು ಮೃತಪಟ್ಟರೆ, ಕೆಲವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಮದ್ಯವನ್ನು ಎಲ್ಲಿಂದ ಖರೀದಿಸಲಾಗಿದೆ ಮತ್ತು ಅದರ ಗುಣಮಟ್ಟದ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.