Sunday, 11th May 2025

ಅಗ್ನಿ ಅವಘಡ: ಫ್ಯಾಷನ್ ಸ್ಟ್ರೀಟ್ ಮಾರುಕಟ್ಟೆಯ ಅಂಗಡಿಗಳು ಭಸ್ಮ

ಪುಣೆ : ಕ್ಯಾಂಪ್ ಪ್ರದೇಶದ ಫ್ಯಾಷನ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 500ಕ್ಕೂ ಹೆಚ್ಚು ಅಂಗಡಿಗಳು ಸಂಪೂರ್ಣ ಸುಟ್ಟುವಾಗಿವೆ.

ಪುಣೆ ಕಂಟೋನ್ಮೆಂಟ್ ಬೋರ್ಡ್ ನ (ಪಿಸಿಬಿ) ಅಗ್ನಿಶಾಮಕ ದಳದ ಮುಖ್ಯಸ್ಥರು ಬೆಂಕಿ ನಂದಿಸಿದ ನಂತರ ಮನೆಗೆ ಹಿಂದಿರುಗು ವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಪಿಸಿಬಿ ಸಿಇಒ ಅಮಿತ್ ಕುಮಾರ್ ಅವರು ಮಾತನಾಡಿ, ‘ಅವರು ನನಗೆ ಕರೆ ಮಾಡಿ ಬೆಂಕಿ ಯನ್ನು ನಿಯಂತ್ರಣದಲ್ಲಿರಿಸಲಾಗಿದೆ ಎಂದು ನನಗೆ ಮಾಹಿತಿ ನೀಡಿದರು. ನಂತರ ವಿಮಾನ ನಿಲ್ದಣಕ್ಕೆ ಹೋಗುವಾಗ ಶನಿವಾರ ಬೆಳಗ್ಗೆ 6.30ರ ಸುಮಾರಿಗೆ ಬಸ್ ಚಕ್ರಕ್ಕೆ ಸಿಲುಕಿ ಪ್ರಕಾಶ್ ಹಸಬೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *