Thursday, 15th May 2025

ದೊಂಬಿವಿಲಿ: ಒಂದೇ ಕುಟುಂಬದ ಐವರು ನೀರು ಪಾಲು

ಕಲ್ಯಾಣ (ಮಹಾರಾಷ್ಟ್ರ): ಮಹಾರಾಷ್ಟ್ರದ ದೊಂಬಿವಿಲಿ ಸಮೀಪದ ಸಂದಾಪ ಗ್ರಾಮದಲ್ಲಿ ಬೆಳಗ್ಗೆ ಭಾರಿ ಅನಾಹುತ ಸಂಭವಿಸಿದ್ದು ಒಂದೇ ಕುಟುಂಬದ ಐವರು ನೀರು ಪಾಲಾಗಿದ್ದಾರೆ.

ಬಟ್ಟೆ ತೊಳೆಯಲು ಹೋದ ಸಂದರ್ಭ ನೀರು ತುಂಬಿದ್ದ ಕ್ವಾರಿಯಲ್ಲಿ ಮುಳುಗಿ ಅತ್ತೆ, ಸೊಸೆ, ಇಬ್ಬರು ಮೊಮ್ಮಕ್ಕಳು ಹಾಗೂ ಅವರ ಸಂಬಂಧಿ ಜಲಸಮಾಧಿ ಯಾಗಿದ್ದಾರೆ.

ಅತ್ತೆ ಮೀರಾ ಗಾಯಕ್​ವಾಡ್ (55) ಅವರು ಸೊಸೆ ಅಪೇಕ್ಷಾ (30) ಜತೆ ಬಟ್ಟೆ ತೊಳೆಯಲು ಹೋಗಿದ್ದರು. ಈ ಸಂದರ್ಭ ಅಪೇಕ್ಷಾ ಅವರ ಮಕ್ಕಳಾದ ಮಯೂರೇಶ್ (15), ಮೋಕ್ಷಾ (15) ಜತೆಯಲ್ಲಿದ್ದರು. ಸಂಬಂಧಿಕ ನಿಲೇಶ್ ಗಾಯಕ್​ವಾಡ್ (15) ಎಂಬ ಬಾಲಕ ಕೂಡ ಇದ್ದ.

ಬಟ್ಟೆ ತೊಳೆಯುವ ಸಂದರ್ಭ ಬಾಲಕ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಉಳಿದವರು ಹಾರಿ ಬಿಟ್ಟಿದ್ದಾರೆ. ಯಾರಿಗೂ ಸರಿಯಾದ ಈಜು ಬರದ ಕಾರಣ ಎಲ್ಲರೂ ಮೃತಪಟ್ಟಿದ್ದಾರೆ.