Tuesday, 13th May 2025

ಭಾರಿ ಮಳೆಗೆ ಗೋಡೆ ಕುಸಿತ: ಒಂದೇ ಕುಟುಂಬದ ಐವರ ಸಾವು

ರಾಯಪುರ್: ಛತ್ತೀಸ್‌ಗಢದಲ್ಲಿ ಭಾರಿ ಮಳೆಗೆ ಮುಂಗೇಲಿ, ಧಮ್ತಾರಿ, ಬಲಾದ್ ಬಜಾರ್, ಸುರ್ಗುಜಾ ಮತ್ತು ಕೊರ್ಬಾ ಸೇರಿದಂತೆ ಬಿಲಾಸ್‌ಪುರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಸಾವು ನೋವುಗಳು ದಾಖಲಾಗಿವೆ.

ಕಂಕೇರ್‌ನಲ್ಲಿ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಪಾಖಂಜೂರ್ ಪ್ರದೇಶದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ.

 

ಬಿಲಾಸಪುರದಲ್ಲಿ 4 ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿದೆ. ಇದ ರಿಂದಾಗಿ ತಗ್ಗು ಪ್ರದೇಶದ ಬಡಾವಣೆಗಳು ಜಲಾವೃತ ಗೊಂಡಿವೆ. ಮುಂಗೇಲಿ ಯಲ್ಲಿ ನೂರಾರು ಜನರು ನೀರಿನ ಮಧ್ಯೆ ಸಿಲುಕಿಕೊಂಡಿದ್ದಾರೆ.

ಭಾನುವಾರ ಧಮ್ತಾರಿಯಲ್ಲಿ ಸೊಂಧೂರು ಅಣೆಕಟ್ಟಿನ ಎಲ್ಲಾ ಗೇಟ್‌ಗಳನ್ನು ತೆರೆಯಲಾಗಿದೆ. ಸೊಂಡೂರು ನದಿಯಿಂದ 2,400 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಬಲಾದ್ ಬಜಾರ್, ಸುರ್ಗುಜಾ ಸೇರಿ ದಂತೆ ಇತರೆ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ.

ನದಿ, ಹಳ್ಳಗಳ ನೀರು ಈಗ ತಗ್ಗು ಪ್ರದೇಶಗಳಲ್ಲಿರುವ ಬಡಾವಣೆ, ವಾರ್ಡ್‌ಗಳಿಗೆ ನುಗ್ಗುತ್ತಿದೆ. ಮನೆಗಳು, ಶಾಲೆಗಳು ಮತ್ತು ಅಂಗಡಿ ಗಳು ನೀರಿನಲ್ಲಿ ಮುಳುಗಿವೆ. ನಗರ ಪ್ರದೇಶಗಳಲ್ಲಿ ಸಿರಗಿತ್ತಿ, ತಿಫ್ರಾ, ಸಕ್ರಿ, ಘೂರು, ಅಮೇರಿ, ಮನ್ನದೋಳ್, ದೀಪಾರಪರ, ಕುಂದರಪರ, ದೇವರಪಾರ, ಯದುನಂದನನಗರ, ಉಸಲಾಪುರ ಮತ್ತು ಸರ್ಕಂದ ಹೆಚ್ಚು ಹಾನಿಗೊಳಗಾಗಿವೆ.

ಗ್ರಾಮೀಣ ಭಾಗಗಳಾದ ಪಚಪೇಡಿ, ಜೊಂಧಾರ, ಮಸ್ತೂರಿ ಭಾಗದಲ್ಲೂ ಪರಿಸ್ಥಿತಿ ಬಿಗಡಾಯಿಸಿದೆ. ಮುಂಗೇಲಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಸರಗಾಂವ ನಗರ ಪಂಚಾಯಿತಿಯಲ್ಲಿ 500ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ.