Monday, 12th May 2025

40 ಕ್ಷಯರೋಗ ರೋಗಿಗಳನ್ನು ದತ್ತು ಪಡೆದ ಸಚಿವ ಮಾಂಡವಿಯಾ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 72 ನೇ ಹುಟ್ಟುಹಬ್ಬದಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಗುಜರಾತ್‌ನ ಪಾಲಿಟಾನಾದಿಂದ 40 ಕ್ಷಯರೋಗ ರೋಗಿಗಳನ್ನು ದತ್ತು ಪಡೆದರು.

ಮಾಂಡವಿಯಾ ಅವರು ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳುವಂತೆ ಜನರನ್ನು ಮನವಿ ಮಾಡಿದರು. ನಾವೆಲ್ಲರೂ ಮೋದಿಜಿಯವರ ಈ ಮಾನವೀಯತೆಯ ಸೇವಾ ಕಾರ್ಯಕ್ಕೆ ಕೈಜೋಡಿಸೋಣ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಟಿಬಿ ಮುಕ್ತ ಭಾರತವನ್ನು ನಿರ್ಮಿಸೋಣ. ನೀವೂ ಸಹ ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳಿʼ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ದೇಶಾದ್ಯಂತ ‘ರಕ್ತದಾನ ಅಮೃತ ಮಹೋತ್ಸವ’ದ ಅಂಗವಾಗಿ ರಕ್ತದಾನ ಮಾಡಲು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮನ್ಸುಖ್ ಮಾಂಡವಿಯಾ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು.

ಟಿಬಿ ಮುಕ್ತ ಭಾರತ( ಅಭಿಯಾನದ ಪ್ರಧಾನಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಪೌಷ್ಟಿಕಾಂಶದ ಬೆಂಬಲ ನೀಡುವ ಮೂಲಕ 35,000 ಕ್ಕೂ ಹೆಚ್ಚು ಕ್ಷಯರೋಗ (ಟಿಬಿ) ರೋಗಿಗಳನ್ನು ದತ್ತು ತೆಗೆದು ಕೊಳ್ಳಲು ನಿರ್ಧರಿಸಿದೆ.