Thursday, 15th May 2025

ಮಿನಿ ಟ್ರಕ್ ಅಪಘಾತ: ನಾಲ್ವರ ಸಾವು

ನಾಶಿಕ್: ಮಹಾರಾಷ್ಟ್ರದ ನಾಶಿಕ್​ ಜಿಲ್ಲೆಯಲ್ಲಿ ಸಂಭವಿಸಿದ ಮಿನಿ ಟ್ರಕ್ ಅಪಘಾತವಾಗಿ ನಾಲ್ವರು ಮೃತಪಟ್ಟು, ಅನೇಕ ಮಂದಿ ಗಾಯಗೊಂಡಿದ್ದಾರೆ.

ಸುಮಾರು ೩೦ ಜನರಿದ್ದ ಪ್ರಯಾಣಿಕ ಗುಂಪು ದೇವಾಲಯಕ್ಕೆ ಮಿನಿಟ್ರಕ್‌ ನಲ್ಲಿ ತೆರಳಿ ದೇವರ ದರ್ಶನ ಪಡೆದು ವಾಪಸ್‌ ಬರುತ್ತಿದ್ದರು. ಚಾಲಿಸ್‌ಗಾಂವ್-ಮಾಲೆಗಾಂವ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ.

ಮೃತರೆಲ್ಲರೂ ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಚಾಲಿಸ್‌ಗಾಂವ್ ತಾಲೂಕಿನ ಮುಂಡ್‌ಖೇಡಾದವರು ಎಂದು ತಿಳಿದುಬಂದಿದೆ. ಮೃತಪಟ್ಟ ನಾಲ್ವರಲ್ಲಿ ಒಬ್ಬರ ಗುರುತು ಮಾತ್ರ ಮಾತ್ರ ಪತ್ತೆಯಾ ಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.