Sunday, 11th May 2025

ನಕಲಿ ಮದ್ಯ ಸೇವನೆ: ಮೃತರ ಸಂಖ್ಯೆ 37

ಪಾಟ್ನಾ: ಹೋಳಿ ಹಬ್ಬದ ದಿನದಿಂದ ಬಿಹಾರದ ಮೂರು ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವನೆಯಿಂದ ಇದುವರೆಗೆ 37 ಜನರು ಮೃತಪಟ್ಟಿದ್ದಾರೆ.

ಭಾಗಲ್ಪುರ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯ ಸಾವುಗಳು ಸಂಭವಿಸಿದ್ದು, ಶನಿವಾರದಿಂದ ಇಲ್ಲಿಯವರೆಗೆ 22 ಜನರು ಮೃತಪಟ್ಟಿ ದ್ದಾರೆ. ಬಂಕಾ ಜಿಲ್ಲೆಯಲ್ಲಿ 12 ಮಂದಿ ಹಾಗೂ ಮಾಧೇಪುರದಲ್ಲಿ 3 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯಿಂದ ಕೆಲವರು ವಿಷಪೂರಿತ ಮದ್ಯ ಸೇವಿಸಿ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಇತರರು ಕೆಲವು ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದರು.

ಹೋಳಿ ಹಬ್ಬದಂದು ಶುಕ್ರವಾರ ಸಂಜೆ ಮತ್ತು ಶನಿವಾರ ಬೆಳಗ್ಗೆ ಮದ್ಯ ಸೇವಿಸಿದ್ದು, ಅಂದಿನಿಂದ ಅವರ ಆರೋಗ್ಯ ಹದಗೆಟ್ಟಿದೆ ಎಂದು ಸಂತ್ರಸ್ತರ ಕುಟುಂಬಸ್ಥರು ಹೇಳಿದ್ದಾರೆ.

ಮದ್ಯ ದಂಧೆಕೋರರ ವಿರುದ್ಧ ಕ್ರಮಕೈಗೊಳ್ಳುವಂತೆ ನಾನು ಭಾಗಲ್ಪುರದ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದೇನೆ.