Wednesday, 14th May 2025

ಕನಿಷ್ಠ 33 ‘ಭಯೋತ್ಪಾದಕರ’ ಹತ್ಯೆ: ಎನ್.ಬಿರೇನ್ ಸಿಂಗ್

ಇಂಫಾಲ: ಹಿಂಸಾತ್ಮಕ ಘಟನೆ ಮತ್ತು ನಾಗರಿಕರ ಮೇಲಿನ ದಾಳಿಗಳ ಪರಿಶೀಲಿಸಲು ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ 33 ‘ಭಯೋತ್ಪಾದಕರು’ ಹತ್ಯೆ ಮಾಡಲಾಗಿದೆ ಎಂದು ಮಣಿಪುರ ಮುಖ್ಯ ಮಂತ್ರಿ ಎನ್.ಬಿರೇನ್ ಸಿಂಗ್ ಹೇಳಿದರು.

ವಿರಳ ಹಿಂಸಾಚಾರವನ್ನು ಪರಿಶೀಲಿಸಲು ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇನೆ ಹೇಳಿದ ಸಮಯದಲ್ಲಿ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮಣಿಪುರದಲ್ಲಿದ್ದಾಗ ಕೂಂಬಿಂಗ್ ಕಾರ್ಯಾಚರಣೆಯನ್ನ ಪ್ರಾರಂಭಿಸ ಲಾಯಿತು.

ಸಶಸ್ತ್ರ ಗುಂಪುಗಳು ಮತ್ತು ಭದ್ರತಾ ಪಡೆಗಳ ನಡುವೆ ಭಾನುವಾರ ಹಲವಾರು ಸ್ಥಳಗಳಲ್ಲಿ ಘರ್ಷಣೆಗಳು ನಡೆದಿವೆ. ಇತ್ತೀಚಿನ ಘರ್ಷಣೆಗಳು ಪ್ರತಿಸ್ಪರ್ಧಿ ಸಮುದಾಯಗಳ ನಡುವೆ ಅಲ್ಲ. ಕುಕಿ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರ ತಿಳಿಸಿದರು.