Monday, 12th May 2025

ದುರ್ಬಲ ವಹಿವಾಟು: ಸಂವೇದಿ ಸೂಚ್ಯಂಕ 300 ಅಂಕ ಕುಸಿತ

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 300 ಅಂಕ ಕುಸಿತ ಕಂಡಿದೆ. ಜಾಗತಿಕ ಷೇರು ಮಾರುಕಟ್ಟೆಯ ದುರ್ಬಲ ವಹಿವಾಟು ಈ ಬೆಳವಣಿಗೆಗೆ ಕಾರಣವಾಗಿದೆ.

ಷೇರುಪೇಟೆಯ ಸಂವೇದಿ ಸೂಚ್ಯಂಕ 305.33 ಅಂಕ ಇಳಿಕೆಯಾಗಿದ್ದು, 49,552.91 ಅಂಕಗಳ ವಹಿವಾಟು ನಡೆಸಿದೆ. ಎನ್ಎಸ್ಇ ನಿಫ್ಟಿ 76 ಅಂಕ ಕುಸಿತವಾಗಿದ್ದು, 14,668ರ ಗಡಿಗೆ ಕುಸಿದಿದೆ.

ಸೆನ್ಸೆಕ್ಸ್ ಕುಸಿತದಿಂದ ಪವರ್ ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಶೇ.2ರಷ್ಟು ನಷ್ಟ ಅನುಭವಿಸಿದೆ. ಮತ್ತೊಂದೆಡೆ ಸನ್ ಫಾರ್ಮಾ, ಡಾ.ರೆಡ್ಡೀಸ್, ಏಷ್ಯನ್ ಪೈಂಟ್ಸ್ ಮತ್ತು ಇನ್ಫೋಸಿಸ್ ಷೇರುಗಳು ಲಾಭ ಗಳಿಸಿವೆ.

ಶುಕ್ರವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 641.72 ಅಂಕ ಏರಿಕೆಯೊಂದಿಗೆ 49,858.24 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಂಡಿತ್ತು. ನಿಫ್ಟಿ 186.15 ಅಂಕ ಏರಿಕೆಯಾಗಿದ್ದು, 14,744 ಅಂಕಗಳ ವಹಿವಾಟಿನೊಂದಿಗೆ ಕೊನೆಗೊಂಡಿತ್ತು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *