Monday, 12th May 2025

ಅಬಕಾರಿ ನೀತಿ ಹಗರಣ ಪ್ರಕರಣ: ವಕೀಲರಿಗೆ 25.25 ಕೋಟಿ ರೂ. ಪಾವತಿ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ತನ್ನ ಪರ ಹೋರಾಡುತ್ತಿರುವ ವಕೀಲರಿಗೆ ದೆಹಲಿಯ ಆಡಳಿತಾ ರೂಢ ಆಮ್ ಆದ್ಮಿ ಪಕ್ಷವು 25.25 ಕೋಟಿ ರೂ.ಗಳನ್ನು ಪಾವತಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ 18 ತಿಂಗಳುಗಳಲ್ಲಿ ವಕೀಲರ ಶುಲ್ಕಕ್ಕಾಗಿ ದೆಹಲಿ ಸರ್ಕಾರದ ಒಟ್ಟು ಖರ್ಚು 28.10 ಕೋಟಿ ರೂ.ಗಳಾಗಿದೆ ಎಂದು ಮೂಲ ಗಳು ತಿಳಿಸಿವೆ.
ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ ಅವರು 25.25 ಕೋಟಿ ರೂ.ಗಳಲ್ಲಿ 18.97 ಕೋಟಿ ರೂ.ಗಳನ್ನು ಪಡೆದಿದ್ದರೆ, ಮತ್ತೊಬ್ಬ ವಕೀಲ ರಾಹುಲ್ ಮೆಹ್ರಾ ಅವರು ಜೈಲು ಪಾಲಾಗಿರುವ ಸಚಿವ ಸತ್ಯೇಂದ್ರ ಜೈನ್ ಅವರ ಪ್ರಕರಣಗಳಲ್ಲಿ ಆಗಾಗ ಹಾಜರಾಗಿ 5.30 ಕೋಟಿ ರೂಗಳನ್ನು ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಸಿಂಘ್ವಿ ಅವರು 2021-22ರಲ್ಲಿ 14.85 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದು, ನಂತರ ರೂ.4.1 ಕೋಟಿ ಪಡೆದೂಕೊಂಡಿದ್ದಾ ರೆಂದು ತಿಳಿದುಬಂದಿದೆ.