Monday, 12th May 2025

2024 Flashback: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು

ನವದೆಹಲಿ: 2024 ಕೆಲವು ಸಿನಿ ತಾರೆಯರ(cienma stars) ಪಾಲಿಗೆ ಲಕ್ಕಿ. ವೃತ್ತಿ ಬದುಕಿನಲ್ಲಿ ಕೆಲವರಿಗೆ ಯಶಸ್ಸು ಸಿಕ್ಕಿರೆ, ಮತ್ತೆ ಕೆಲವರು ತಮ್ಮ ಮೆಚ್ಚಿನ ಸಂಗಾತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾಗಳು ಹೆಚ್ಚು ಜಾದು ಮಾಡುವುದರ ಜೊತೆಗೆ ತಾರೆಯರ ವೈಯಕ್ತಿಕ ಬದುಕಿನಲ್ಲಿ ಬದಲಾವಣೆಗಳಾಗಿವೆ. ಒಂದ್ಕಡೆ ಕನ್ನಡ ಚಿತ್ರರಂಗ ತಾರೆಯರು (Celebreties) ತಮ್ಮ ಬಹುದಿನದ ಗೆಳಯ ಹಾಗೂ ಗೆಳತಿಯೊಂದಿಗೆ ವೈವಾಹಿಕ(Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಸಪ್ತಪದಿ ತುಳಿದ ತಾರೆಯರ ಪಟ್ಟಿ ಇಲ್ಲಿದೆ.

ಇರಾ ಖಾನ್ ಮದುವೆ ‘ಮಿ ಪರ್ಫೆಕ್ಷನಿಸ್ಟ್’ ಬಾಲಿವುಡ್‌ ನಟ ಆಮಿರ್ ಖಾನ್ ಅವರ ಪುತ್ರಿ ಇರಾ ಖಾನ್ ಮದುವೆ ಜ.3ರಂದು ಅತ್ಯಂತ ಸಂಭ್ರಮದಿಂದ ಮಾಡಿದ್ದರು. ಕೋವಿಡ್‌ ಸಮಯದಲ್ಲಿ ಆಮಿರ್ ಖಾನ್ ಕುಟುಂಬದ ಜೊತೆಗೆ ವಾಸವಾಗಿದ್ದ ಫಿಟ್ನೆಸ್​ ಟ್ರೇನರ್ ನೂಪುರ್ ಶಿಖಾರೆಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇರಾ ಖಾನ್ ಪ್ರಪೋಸ್ ಮಾಡಿದ್ದರು. ನವೆಂಬರ್‌ನಲ್ಲಿ ಇಬ್ಬರ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಈ ವಿವಾಹ ಸಮಾರಂಭಕ್ಕೆ ಉದ್ಯಮಿಗಳಾದ ಮುಕೇಶ್ ಅಂಬಾನಿ, ನೀತಾ ಅಂಬಾನಿ ಹಾಗೂ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು.

ದಾಂಪತ್ಯಕ್ಕೆ ಕಾಲಿಟ್ಟ ರಾಕುಲ್‌ ಪ್ರೀತ್ ಸಿಂಗ್ – ಜಾಕಿ ಭಗ್ನಾನಿ
ಬಹುಭಾಷಾ ನಟಿ ರಾಕುಲ್ ಪ್ರೀತಿ ಸಿಂಗ್, ಬಾಲಿವುಡ್ ನಟ ಕಂ ನಿರ್ಮಾಪಕರಾದ ಜಾಕಿ ಭಗ್ನಾನಿ ಗೋವಾ ಬೀಚ್‌ ಸಮೀಪ ಫೆಬ್ರವರಿ 21 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳಿಂದ ಪ್ರೇಮದಲ್ಲಿದ್ದ ರಕುಲ್, ಜಾಕಿ ಗೋವಾದಲ್ಲಿ ಬೆಳಗ್ಗೆ ಸಿಖ್ ಸಂಪ್ರದಾಯದಂತೆ ಹಾಗೂ ಸಿಂಧಿ ಸಂಪ್ರದಾಯದಂತೆ ವಿವಾಹವಾದರು. ರಕುಲ್‌ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಇಬ್ಬರು ಅಕ್ಕಪಕ್ಕದ ಮನೆಯವರು. ಇಬ್ಬರ ನಡುವೆ ಮೊದಲಿನಿಂದಲೂ ಸ್ನೇಹವಿತ್ತು. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಇಬ್ಬರ ಮಧ್ಯೆ ಪ್ರೇಮವಾಗಿತ್ತು. 2021ರಲ್ಲಿ ಜಾಕಿ ಭಗ್ನಾನಿ, ರಕುಲ್‌ ಅವರ ಜನ್ಮದಿನಕ್ಕೆ ಶುಭಾಶಯ ತಿಳಿಸುವ ಮೂಲಕ ತಮ್ಮ ಪ್ರೀತಿ ಸಂದೇಶ ತಿಳಿಸಿದ್ದರು. ಅಂದೇ ಇವರಿಬ್ಬರ ಸಂಬಂಧ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತಗೊಳಿಸಲಾಗಿತ್ತು. ಅಂದಿನಿಂದ ಇಬ್ಬರು ಹಲವು ಸಮಾರಂಭ, ಔತಣಕೂಟ, ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಗೂಗ್ಲಿʼ ಸಿನಿಮಾ ನಟಿ
ಹಲವು ವರ್ಷಗಳಿಂದ ಡೇಟ್‌ ಮಾಡುತ್ತಿದ್ದ ಪುಲ್ಕಿತ್ ಸಾಮ್ರಾಟ್ ಹಾಗೂ ʻಗೂಗ್ಲಿʼ ಸಿನಿಮಾ ನಟಿ ಕೃತಿ ಕರಬಂದ ಮಾರ್ಚ್ 15ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರು ಅದ್ಧೂರಿ ವಿವಾಹ ದೆಹಲಿಯ ಐಟಿಸಿ ಗ್ರ್ಯಾಂಡ್ ಭಾರತ್​ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಗಳು ಜರುಗಿವೆ. ಆಪ್ತರು ಹಾಗೂ ಕುಟುಂಬದವರು ಮಾತ್ರ ಈ ಮದುವೆಗೆ ಆಗಮಿಸಿದ್ದರು.

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ- ನಟ ಜಹೀರ್ ಇಕ್ಬಾಲ್ ಕಲ್ಯಾಣ
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ನಟ ಜಹೀರ್ ಇಕ್ಬಾಲ್ ಅವರನ್ನು 23 ಜೂನ್ 2024 ರಂದು ವಿವಾಹವಾದರು.ಏಳು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ಮಾಡಿದ ನಂತರ ಮುಂಬೈನಲ್ಲಿ ಈ ಜೋಡಿ ತಮ್ಮ ಹತ್ತಿರದ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆ ಮೂಲಕ ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್ ವಿವಾಹವಾದರು. ಸೋನಾಕ್ಷಿ ಮತ್ತು ಜಹೀರ್ ವಿವಾಹದ ಆರತಕ್ಷತೆಯನ್ನು ಮುಂಬೈನ ಐಷಾರಾಮಿ ರೆಸ್ಟೋರೆಂಟ್​ವೊಂದರಲ್ಲಿ ಆಯೋಜಿಸಲಾಗಿತ್ತು.

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜುಲೈ 12 ರಂದು ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ಅವರ ರಾಯಲ್ ವೆಡ್ಡಿಂಗ್‌ ನಡೆಯಿತು. ದೇಶ, ವಿದೇಶಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಅತಿಥಿಗಳು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ರಾಜಕೀಯ ಕ್ಷೇತ್ರ, ಸಿನಿಮಾ, ಕ್ರಿಕೆಟ್ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವಾರು ಗಣ್ಯರು ಆಗಮಿಸಿ ನವ ದಂಪತಿಯನ್ನು ಆಶೀರ್ವದಿಸಿದರು. ಅಂಬಾನಿ ಕುಟುಂಬದ ಮದುವೆ ಸಮಾರಂಭದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಅನೇಕ ನಾಯಕರು ಕಾಣಿಸಿಕೊಂಡಿದ್ದರು.

ಸಿದ್ಧಾರ್ಥ – ಅದಿತಿ ರಾವ್ ಹೈದರಿ
ಸೆಪ್ಟೆಂಬರ್​ 16 ರಂದು ನಟ, ನಿರ್ಮಾಪಕ ಆಗಿರೋ ಸಿದ್ಧಾರ್ಥ ಸ್ಟಾರ್ ನಟಿ ಅದಿತಿ ರಾವ್ ಹೈದರಿ 400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥಗೆ ಇದು ಎರಡನೇ ಮದುವೆಯಾಗಿದೆ. ಅದಿತಿ ಈ ಮೊದಲು ನಟ ಸತ್ಯದೀಪ್ ಮಿಶ್ರಾ ಎನ್ನುವರನ್ನು ಮದುವೆಯಾಗಿದ್ದರು. ಈ ಇಬ್ಬರ ನಡುವೆ 2012ಕ್ಕೆ ವಿಚ್ಚೇದನ ಆಗಿತ್ತು. ಸಿದ್ದಾರ್ಥ್ 2003ರಲ್ಲಿ ಮೇಘನಾ ಎಂಬುವವರನ್ನು ಮದುವೆಯಾಗಿದ್ದರು. 2007ರಲ್ಲಿ ಅವರಿಂದ ದೂರವಾಗಿದ್ದರು. ನಿರ್ಮಾಪಕ, ನಿರ್ದೇಶಕ, ಹಿನ್ನೆಲೆ ಗಾಯಕ, ಕಥೆಗಾರ ಹೀಗೆ ಬಹುಮುಖ ಪ್ರತಿಭೆಯಾಗಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸಿದ್ಧಾರ್ಥ್ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ನಟಿ ಅದಿತಿ ಮತ್ತು ಸಿದ್ಧಾರ್ಥ್ 2021ರ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ ಮಹಾ ಸಮುದ್ರಂನಲ್ಲಿ ಒಟ್ಟಿಗೆ ನಟಿಸಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗ ಚೈತನ್ಯ – ನಾಯಕಿ ಶೋಭಿತಾ ಧೂಳಿಪಾಲ
ಅಕ್ಕಿನೇನಿ ನಾಗ ಚೈತನ್ಯ ಮತ್ತು ನಾಯಕಿ ಶೋಭಿತಾ ಧೂಳಿಪಾಲ ಡಿಸೆಂಬರ್ 4ರಂದು ವೈವಾಹಿಕ ಜೀವನಕ್ಕೆ ಕಾಲಿಟ್ರು. ಈ ಸ್ಟಾರ್ ಜೋಡಿಯ ಮದುವೆ ಅದ್ಧೂರಿಯಾಗಿ ನಡೆದಿತ್ತು. ಡಿಸೆಂಬರ್ 4ರ ರಾತ್ರಿ 8.15ರ ಶುಭ ಮುಹೂರ್ತದಲ್ಲಿ ನಾಗ ಚೈತನ್ಯ, ಶೋಭಿತಾಗೆ ಮೂರು ಗಂಟು ಹಾಕಿದ್ರು. ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಇಬ್ಬರ ವಿವಾಹ ಸಮಾರಂಭ ನಡೆದಿತ್ತು. ಸಮಂತಾ ಜೊತೆಗಿನ ವಿಚ್ಛೇದನದ ನಂತರ 2 ವರ್ಷಗಳ ಕಾಲ ಶೋಭಿತಾ ಧೂಳಿಪಲ ಜೊತೆ ಡೇಟಿಂಗ್ ಮಾಡುತ್ತಿದ್ದ ನಾಗ ಚೈತನ್ಯ, ಎರಡೂ ಕಡೆಯ ಹಿರಿಯರ ಮನವೊಲಿಸಿ ಈ ವರ್ಷ ಆಗಸ್ಟ್‌ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ಸ್ಟಾರ್​ ಜೋಡಿ ಮದುವೆ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನೆರವೇರಿತು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ಕೀರ್ತಿ ಸುರೇಶ್
ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾದ ಕೀರ್ತಿ ಸುರೇಶ್ ಅವರ ಮದುವೆಯು ಡಿಸೆಂಬರ್ 12ರಂದು ಗೋವಾದಲ್ಲಿ ನಡೆದಿದೆ. ತಮ್ಮ15 ವರ್ಷಗಳ ಬಾಯ್‌ಫ್ರೆಂಡ್ ಆಂಟೋನಿ ತಟ್ಟಿಲ್ ಜೊತೆಗೆ ಕೀರ್ತಿ ಸುರೇಶ್ ಮದುವೆ ಆಗಿದ್ದಾರೆ. ಬಹಳ ಅದ್ದೂರಿಯಾಗಿ ಮತ್ತು ಶಾಸ್ತ್ರೋಕ್ತವಾಗಿ ‘ಮಹಾನಟಿ’ ಕಲ್ಯಾಣವು ನಡೆದಿದೆ.

ಈ ಸುದ್ದಿಯನ್ನು ಓದಿ: Year Ender 2024: ಬಾಬಾ ಸಿದ್ದಿಕಿ, ಸೀತಾರಾಮ್ ಯೆಚೂರಿ; ಈ ವರ್ಷ ನಮ್ಮನ್ನಗಲಿದ ರಾಜಕೀಯ ಕ್ಷೇತ್ರದ ​ಗಣ್ಯರು ಇವರು