Wednesday, 14th May 2025

18,840 ಕೋವಿಡ್ ಸೋಂಕು ಪ್ರಕರಣ ದೃಢ

ನವದೆಹಲಿ: ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 18,840 ಕೋವಿಡ್ 19 ಸೋಂಕು ಪ್ರಕರಣ ದೃಢಪಟ್ಟಿದ್ದು, ಪ್ರಕರಣಗಳ ಒಟ್ಟು ಸಂಖ್ಯೆ 4,36,04,394ಕ್ಕೆ ಏರಿಕೆಯಾಗಿದೆ.

ಒಂದೇ ದಿನದಲ್ಲಿ ಕೋವಿಡ್ ನಿಂದ 43 ಜನರು ಮೃತಪಟ್ಟಿದ್ದಾರೆ. ಈವರೆಗೆ ಕೋವಿಡ್ ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,25,386ಕ್ಕೆ ಹೆಚ್ಚಳವಾಗಿದೆ. ದೇಶದ ಐದು ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ.

ಕೇರಳದಲ್ಲಿ 3,310, ಪಶ್ಚಿಮಬಂಗಾಳದಲ್ಲಿ 2,950, ಮಹಾರಾಷ್ಟ್ರದಲ್ಲಿ 2,944, ತಮಿಳು ನಾಡಿ ನಲ್ಲಿ 2,722 ಹಾಗೂ ಕರ್ನಾಟಕದಲ್ಲಿ 1,037 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಅಂಕಿಅಂಶ ವಿವರಿಸಿದೆ.

24 ಗಂಟೆಯಲ್ಲಿ 16,104 ರೋಗಿಗಳು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶಾದ್ಯಂತ ಈವರೆಗೆ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,29,53,980ಕ್ಕೆ ಹೆಚ್ಚಳವಾಗಿದೆ.