Wednesday, 14th May 2025

ತಿರುಪತಿಯಲ್ಲಿ ಭಾರೀ ಮಳೆ: ಸುರಕ್ಷಿತ ಸ್ಥಳಗಳಿಗೆ 18 ಹಳ್ಳಿಗಳ ಜನರ ಸ್ಥಳಾಂತರ

ತಿರುಪತಿ: ತಿರುಪತಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಾಳಾ ಗಿರುವುದರಿಂದ ಶ್ರೀಕ್ಷೇತ್ರಕ್ಕೆ ಆಗಮಿಸುವವರಿಗೆ ತೀವ್ರ ತೊಂದರೆಯಾಗಿದೆ.

ತಿರುಪತಿಗೆ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ನಿಂದ ಹೋಗುವ ಎಲ್ಲ ಮಾರ್ಗಗಳೂ ಬಂದ್‌ ಆಗಿವೆ. ತಿರುಪತಿಯನ್ನು ಸಂಪರ್ಕಿಸುವ ರೈಲು ಸಂಚಾರ ಸ್ಥಗಿತಗೊಳಿಸಲಾಗಿದ್ದು ತಿರುಪತಿಗೆ ಸಂಪರ್ಕವೇ ತಪ್ಪಿಹೋಗಿದೆ.

ಮಳೆಯಿಂದಾಗಿ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಸುತ್ತಲೂ ತುಂಬಿಕೊಂಡಿದ್ದ ಮಳೆ ನೀರನ್ನು ಬೇರೆಡೆಗೆ ಪಂಪ್‌ಔಟ್‌ ಮಾಡಲು ಅಧಿಕಾರಿ ಗಳು ಹರಸಾಹಸ ಪಡುತ್ತಿದ್ದಾರೆ. ಅಣೆಕಟ್ಟಿನಲ್ಲಿ ಬಿರುಕುಗಳು ಕಾಣಿಸಿಕೊಂಡಿರು ವುದು ಸುತ್ತಲಿನ ಜನರಿಗೆ ಭೀತಿಗೊಳಗಾಗಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ತೂರು ಜಿಲ್ಲಾಡಳಿತ 18 ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.

ನ. 18ರಿಂದ ನ. 30ವರೆಗಿನ ಅವಧಿಯಲ್ಲಿ ತಿರುಮಲದ ಶ್ರೀ ವೆಂಕಟೇಶ್ವರ ಸನ್ನಿ ಧಾನಕ್ಕೆ ಭೇಟಿ ನೀಡಲು ಟಿಕೆಟ್‌ ಪಡೆದಿದ್ದ ಎಲ್ಲ ಭಕ್ತರಿಗೆ ಬೇರೆ ನಿರ್ದಿಷ್ಟ ದಿನಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ದೇವಸ್ಥಾನಂ ಮಂಡಳಿ ತಿಳಿಸಿದೆ.

ದರ್ಶನ ಪಡೆಯದ ಭಕ್ತರಿಗಾಗಿ ಪ್ರತ್ಯೇಕ ಸಾಫ್ಟ್ ವೇರ್‌ ರೂಪಿಸಲಾಗುತ್ತದೆ. ಅದನ್ನು ಬಳಸಿ, ಭಕ್ತರು ಬೇರೊಂದು ದಿನ ದರ್ಶನಕ್ಕೆ ಅವಕಾಶ ಪಡೆಯ ಬಹುದು ಎಂದು ಟಿಟಿಡಿ ಹೇಳಿದೆ.

Leave a Reply

Your email address will not be published. Required fields are marked *