Thursday, 15th May 2025

ದಂತೇವಾಡಾದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲಿನ 17 ಬೋಗಿಗಳು

Dantewada

ದಂತೇವಾಡಾ: ಛತ್ತೀಸ್‌ಗಡದ ದಂತೇವಾಡಾ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ತುಂಬಿದ್ದ ಗೂಡ್ಸ್ ರೈಲಿನ 17 ಬೋಗಿಗಳು ಹಳಿ ತಪ್ಪಿದ್ದು, ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಕಿರಾಂದುಲ್-ವಿಶಾಖಪಟ್ಟಣ ರೈಲ್ವೆ ವಿಭಾಗದಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.

ಕಬ್ಬಿಣದ ಅದಿರು ತುಂಬಿದ ರೈಲು ಕಿರಾಂದುಲ್ (ದಂತೇವಾಡಾ)ದಿಂದ ವಿಶಾಖಪಟ್ಟಣಕ್ಕೆ ಚಲಿಸುತ್ತಿದ್ದಾಗ ಭನ್ಸ್ ಮತ್ತು ಕಮಲೂರ್ ನಿಲ್ದಾಣಗಳ ನಡುವೆ ಘಟನೆ ನಡೆದಿದೆ ಎಂದು ದಂತೇವಾಡಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ರೈಲು ಹಳ್ಳಿ ತಪ್ಪಿದ ಪರಿಣಾಮ ಜಗದಲಪುರ ಮತ್ತು ಕಿರಾಂದುಲ್ ನಡುವೆ ರೈಲುಗಳ ಸಂಚಾರಕ್ಕೆ ತೊಂದರೆ ಯಾಗಿದೆ ಎಂದು ಹೇಳಿದರು.

ಮಾವೋವಾದಿಗಳ ಕೈವಾಡ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ತನಿಖೆಯಲ್ಲಿ ಯಾಂತ್ರಿಕ ದೋಷಗಳಿಂದಾಗಿ ಘಟನೆ ಸಂಭವಿಸಿರಬಹುದು ಎಂದು ವಿವರಣೆ ನೀಡಿದ್ದಾರೆ.