Thursday, 15th May 2025

ಅಗ್ನಿ ದುರಂತ: 15 ಅಧಿಕಾರಿಗಳ ಅಮಾನತು

ಕ್ನೋ : ಲಕ್ನೋದ ಹೋಟೆಲೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ಮೃತಪಟ್ಟ ಸಂಬಂಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದೇಶದ ಮೇರೆಗೆ ಐದು ಸರ್ಕಾರಿ ಇಲಾಖೆಗಳ ಒಟ್ಟು 15 ಅಧಿಕಾರಿಗಳನ್ನು ಅಮಾನತು ಗೊಳಿಸಲಾಗಿದೆ.

ಲಕ್ನೋ ಪೊಲೀಸ್ ಕಮಿಷನರ್ ಎಸ್ ಬಿ ಶಿರಾಡ್ಕರ್ ಮತ್ತು ಕಮಿಷನರ್ (ಲಕ್ನೋ ವಿಭಾಗ) ರೋಷನ್ ಜೇಕಬ್ ಅವರನ್ನೊಳ ಗೊಂಡ ದ್ವಿಸದಸ್ಯ ತನಿಖಾ ಸಮಿತಿ ವರದಿ ಸಲ್ಲಿಸಿದ ನಂತರ ಈ ಕ್ರಮವನ್ನು ಪ್ರಾರಂಭಿಸಲಾಗಿದೆ.

ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ಲಕ್ನೋ ಮತ್ತು ವಿಭಾಗೀಯ ಆಯುಕ್ತ ಲಕ್ನೋ ಅವರ ತನಿಖಾ ವರದಿಯನ್ನು ಸ್ವೀಕರಿಸಿದ ನಂತರ ಮುಖ್ಯಮಂತ್ರಿಯವರು ಈ ಸೂಚನೆಗಳನ್ನು ನೀಡಿದ್ದಾರೆ.

ಲಕ್ನೋದ ಹೋಟೆಲ್ ಲೆವಾನಾದಲ್ಲಿ ಸಂಭವಿಸಿದ ಬೆಂಕಿ ಘಟನೆಯಲ್ಲಿ ಪ್ರಾಥಮಿಕವಾಗಿ ಅನಿಯಮಿತ ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸಿಎಂ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.