Wednesday, 14th May 2025

ಎಂಡೋಸಲ್ಫಾನ್‌: 3014 ಸಂತ್ರಸ್ತರಿಗೆ 120 ಕೋಟಿ ಪರಿಹಾರ ವಿತರಣೆ

ತಿರುವನಂತಪುರ: ಕಾಸರಗೋಡಿನ ಎಂಡೋಸಲ್ಫಾನ್‌ ದುರಂತಕ್ಕೆ ಒಳಗಾದ 3014 ಸಂತ್ರಸ್ತರಿಗೆ ಇದುವರೆಗೆ 119.34 ಕೋಟಿ ಪರಿಹಾರವನ್ನು ವಿತರಿಸಲಾಗಿದೆ ಎಂದು ಕೇರಳ ಸರ್ಕಾರದ ವರದಿ ಹೇಳಿದೆ.

ಪರಿಹಾರ ವಿತರಣೆ ಮತ್ತು ವಿವಿಧ ಪುನರ್ವಸತಿ ಕ್ರಮಗಳ ಅನುಷ್ಠಾನಕ್ಕೆ ಒತ್ತಾ ಯಿಸಿ ಎಂಡೋಸಲ್ಫಾನ್ ಸಂತ್ರಸ್ತರು ಮತ್ತು ಅವರ ಕುಟುಂಬದ ಸದಸ್ಯರು ಪ್ರತಿಭಟನೆ ನಡೆ ಸಿದ ವಾರಗಳ ನಂತರದಲ್ಲಿ ಸಾಮಾಜಿಕ ನ್ಯಾಯ ಸಚಿವೆ ಆರ್‌.ಬಿಂದು ಹೇಳಿಕೆ ನೀಡಿ ದ್ದಾರೆ.

ಐಯುಎಂಎಲ್‌ ಶಾಸಕ ಯು.ಎ.ಲತೀಫ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ತರ ಕಾಸರ ಗೋಡು ಜಿಲ್ಲೆಯ ಮುಳಿಯಾರ್‌ನಲ್ಲಿ ಉದ್ದೇಶಿತ ಎಂಡೋಸಲ್ಫಾನ್‌ ಪುನರ್ವಸತಿ ಗ್ರಾಮಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು.

‘2017ರ ಸುಪ್ರೀಂಕೋರ್ಟ್‌ ತೀರ್ಪಿನ ಆಧಾರದಲ್ಲಿ ಪರಿಹಾರ ವಿತರಿಸಲಾಗಿದೆ. ಉಳಿದ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ’ ಎಂದು ಸಚಿವೆ ಹೇಳಿದರು.

ಎಂಡೋಸಲ್ಫಾನ್ ಭಾಗಶಃ ‍ಪರವಾನಗಿ ಪಡೆದ ಕೀಟನಾಶಕವಾಗಿದೆ. 2011ರಲ್ಲಿ ಸುಪ್ರೀಂಕೋರ್ಟ್‌ ಇದರ ಉತ್ಪಾದನೆ ಮತ್ತು ವಿತರಣೆಯನ್ನು ನಿಷೇಧಿಸುವವರೆಗೆ ಕೀಟನಾಶಕವನ್ನು ಗೋಡಂಬಿ, ಹತ್ತಿ, ಚಹಾ, ಭತ್ತ, ಹಣ್ಣುಗಳು ಮತ್ತು ಇತರ ಬೆಳೆಗಳ ಮೇಲೆ ವ್ಯಾಪಕವಾಗಿ ಬಳಸಲಾಗುತ್ತಿತ್ತು.

 

Leave a Reply

Your email address will not be published. Required fields are marked *