ಮಹಾರಾಷ್ಟ್ರ: ಶನಿವಾರ ತಡರಾತ್ರಿ ಮುಂಬೈನಲ್ಲಿ ಸುರಿದ ಭಾರಿ ಮಳೆಯಿಂದ ಮಹುಲ್ ಪ್ರದೇಶದ ಭಾರತ್ ನಗರದಲ್ಲಿ ಭೂಕುಸಿತ ಸಂಭವಿಸಿದೆ. ಮನೆಗಳ ಗೋಡೆ ಕುಸಿದು 12 ಮಂದಿ ಮೃತಪಟ್ಟಿ ದ್ದಾರೆ.
ಒಟ್ಟಾರೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಇದುವರೆಗೆ 15 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಸತತ ಮಳೆಯಿಂದಾಗಿ ಮುಂಬೈನ ವಿಕ್ರೋಲಿ ಉಪನಗರದಲ್ಲಿ ಭೂಕುಸಿತ ಉಂಟಾಗಿ, 5 ಗುಡಿಸಲುಗಳು ಕುಸಿದಿದ್ದು, ಮೂವರು ನಿವಾಸಿಗಳು ಮೃತಪಟ್ಟಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್), ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಭಾರಿ ಮಳೆಯಿಂದಾಗಿ ಮುಂಬೈ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.