Wednesday, 14th May 2025

ಬುಕಾರೆಸ್ಟ್‌ನಿಂದ ಹಿಂಡನ್ ವಾಯುನೆಲೆಗೆ ಬಂದಿಳಿದ 119 ಭಾರತೀಯರು

#Bucharest

ನವದೆಹಲಿ:ಭಾರತೀಯ ವಾಯುಪಡೆಯ ವಿಮಾನವು 119 ಭಾರತೀಯರು ಮತ್ತು 27 ವಿದೇಶಿಯರೊಂದಿಗೆ ಗುರುವಾರ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಹಿಂಡನ್ ವಾಯುನೆಲೆಗೆ ಬಂದಿಳಿದಿದೆ.

ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಿಸಲು ಎಎಎಫ್ ಕಾರ್ಯ ನಿರ್ವಹಿಸಿದ್ದು, ಈ ವರೆಗೂ ಸಾಕಷ್ಟು ಭಾರತೀ ಯರನ್ನು ಹೊತ್ತ 17 ವಿಮಾನ ಗಳು ಉಕ್ರೇನ್ ನಿಂದ ಭಾರತಕ್ಕೆ ಬಂದಿಳಿದಿವೆ.

ಫೆಬ್ರವರಿ 24 ರಿಂದ ಉಕ್ರೇನಿಯನ್ ವಾಯುಪ್ರದೇಶ ಮುಚ್ಚಿರುವುದರಿಂದ ಭಾರತವು ಯುದ್ಧಪೀಡಿತ ಉಕ್ರೇನ್‌ನ ನೆರೆಯ ದೇಶ ಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮತ್ತು ಪೋಲೆಂಡ್‌ನಿಂದ ನಾಗರಿಕರನ್ನು ಸ್ಥಳಾಂತರಿಸುತ್ತಿದೆ.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಅವರು ವಾಯುನೆಲೆಗೆ ಬಂದ ಭಾರತೀಯರು ಹಾಗೂ ವಿದೇಶಿಯರನ್ನು ಸ್ವಾಗತಿಸಿದರು.