Thursday, 15th May 2025

ಬೀದಿ ಬದಿ ಪಾನಿಪುರಿ ತಿಂದು 100 ಮಂದಿ ಅಸ್ವಸ್ಥ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸುಗಂಧ ಗ್ರಾಮ ಪಂಚಾಯತ್‌ನ ಡೋಗಾಚಿಯಾ ಪ್ರದೇಶದಲ್ಲಿ ಬೀದಿ ಬದಿ ಮಾರುವ ಪಾನಿಪುರಿ ತಿಂದು 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ಪಾನಿ ಪೂರಿ ತಿಂದ ಬಳಿಕ ಅಷ್ಟೂ ಮಂದಿಗೂ ವಾಂತಿ ಹಾಗೂ ಭೇದಿ ಕಾಣಿಸಿ ಕೊಂಡಿದೆ. ಪ್ರತಿಯೊಬ್ಬರಲ್ಲೂ ಅತಿಸಾರದ ಲಕ್ಷಣ ಗಳು ಕಂಡು ಬಂದಿದ್ದು ಮಾಹಿತಿ ಪಡೆದ ಆರೋಗ್ಯ ಇಲಾಖೆಯ ವಿಶೇಷ ತಂಡ ಸ್ಥಳಕ್ಕೆ ಆಗಮಿಸಿ ರೋಗಿಗಳಿಗೆ ಔಷಧ ವಿತರಣೆ ಮಾಡಿದ್ದಾರೆ.

ಗಂಭೀರ ಅನಾರೋಗ್ಯ ಪರಿಣಾಮ ಕಂಡುಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ತಂಡವು ಸೂಚಿಸಿದೆ. ಅನಾ ರೋಗ್ಯಕ್ಕೆ ಒಳಗಾದವರಲ್ಲಿ ಡೊಗಾಚಿಯಾ, ಬಹಿರ್ ರಣಗಾಚಾ ಹಾಗೂ ಮಕಲ್ತಲಾ ನಿವಾಸಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.