Monday, 12th May 2025

’ಮಹಾ’ ಸಂಕಟ: 10 ಸಚಿವರು, 20 ಶಾಸಕರಿಗೆ ಸೋಂಕು ದೃಢ

AJit Pawar

ನವದೆಹಲಿ: ಮಹಾರಾಷ್ಟ್ರ ಸರ್ಕಾರಕ್ಕೆ ಕರೋನಾ ಸಂಕಷ್ಟ ಎದುರಾಗಿದ್ದು, ರಾಜ್ಯದ 10 ಸಚಿವರಿಗೆ ಹಾಗೂ 20 ಶಾಸಕರಿಗೆ ಸೋಂಕು ತಗುಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವರ್ ಮಾಹಿತಿ ನೀಡಿದ್ದಾರೆ.

ರಾಜ್ಯ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿ ತತ್ತರಿಸುವಾಗ ಸಚಿವರಿಗೆ ಹಾಗೂ ಶಾಸಕರಿಗೆ ಕೊರೊನಾ ಸೋಂಕು ತಗುಲಿರೋದು ಆತಂಕಕ್ಕೆ ಕಾರಣವಾಗಿದೆ.

ಕರೋನಾ ಉಲ್ಬಣ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನವನ್ನ ಮೊಟಕುಗೊಳಿಸಿದ್ದೇವೆ.

ರಾಜ್ಯದಲ್ಲಿ ವೇಗವಾಗಿ ಒಮೈಕ್ರಾನ್ ಸೋಂಕು ಹರಡುತ್ತಿದೆ. ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಎಲ್ಲರೂ ಕೂಡ ಕರೋನಾ ನಿಯಮಗಳನ್ನ ಚಾಚೂ ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕಳೆದ ವರ್ಷ ಬರೋಬ್ಬರಿ 7,85,110 ಮಂದಿಯನ್ನ ಸೋಂಕು ಬಾಧಿಸಿದೆ.