Monday, 12th May 2025

ತಿರುಪತಿ: ಸೂಪರ್ ಸ್ಪೆಷಲ್ ದರ್ಶನಕ್ಕೆ 1.5 ಕೋಟಿ ರೂ. ನಿಗದಿ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ, ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಹಣ ಸಂಗ್ರಹಿಸಲು ಮುಂದಾಗಿದೆ.

ಈ ಹಿನ್ನಲೆಯಲ್ಲಿ ‘ಉದಯಾಸ್ತಮಾನ’ ಸೇವೆ ಟಿಕೆಟ್ ಗಳ ಮಾರಾಟಕ್ಕೆ ಚಾಲನೆ ನೀಡಲಾಗಿದ್ದು, ಶುಕ್ರವಾರದ ಸೂಪರ್ ಸ್ಪೆಷಲ್ ದರ್ಶನಕ್ಕೆ 1.5 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಅಭಿಷೇಕ ಸೇರಿದಂತೆ ಹಲವು ಸೇವೆಗಳು ಇದರಲ್ಲಿ ಒಳಗೊಂಡಿದೆ ಎಂದು ಹೇಳಲಾಗಿದೆ.

ಟಿಕೆಟ್ ಪಡೆದ ಭಕ್ತ ಮತ್ತು ಅವರ ಕುಟುಂಬದ ಐವರು ಸದಸ್ಯರು ಸುಪ್ರಭಾತದಿಂದ ಆರಂಭವಾಗುವ ದಿನದ ಎಲ್ಲ ದೈವಿಕ ಆಚರಣೆಗಳನ್ನು ವೀಕ್ಷಿಸಲು ಜೊತೆಗೆ ಗರ್ಭಗುಡಿ ಸೇರಿದಂತೆ ಇತರ ನಿಗದಿತ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ಅವಕಾಶ ಇರುತ್ತದೆ.

ಟಿಕೆಟ್ ಪಡೆದ ಭಕ್ತರು 25 ವರ್ಷಗಳವರೆಗೆ ಪ್ರತಿ ವರ್ಷ ಒಂದು ನಿಗದಿತ ದಿನದಂದು ಭೇಟಿ ನೀಡಬಹುದಾಗಿದ್ದು, ಕಂಪನಿ ಅಥವಾ ಸಂಸ್ಥೆಗಳು ಟಿಕೆಟ್ ಪಡೆದಿದ್ದರೆ ಅದರ ಸಿಂಧುತ್ವದ ಅವಧಿ 20 ವರ್ಷಗಳಾಗಿರುತ್ತದೆ.